ಸ್ಯಾಂಡಲ್ವುಡ್ ನಟಿ ಚೈತ್ರಾ ಆಚಾರ್ (Chaithra Achar) ಮತ್ತೆ ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಬೋಲ್ಡ್ ಆಗಿ ‘ಟೋಬಿ’ (Toby) ಸುಂದರಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ನ್ಯೂ ಲುಕ್ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.
ಬಿಳಿ ಬಣ್ಣದ ಶರ್ಟ್- ಲೈಟ್ ಕಲರ್ ಸ್ಕರ್ಟ್ ಧರಿಸಿದ್ದಾರೆ ಚೈತ್ರಾ. ಮಾದಕ ನೋಟ ಬೀರುವ ಮೂಲಕ ಸಖತ್ ಬೋಲ್ಡ್ & ಬ್ಯೂಟಿಫುಲ್ ಆಗಿ ಚೈತ್ರಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಚೈತ್ರಾ ಫೋಟೋ ನೋಡ್ತಿದ್ದಂತೆ ಬಾಲಿವುಡ್ ನಟಿ ಆಲಿಯಾ ಭಟ್ಗೆ ಹೋಲಿಸಿ ಹೊಗಳಿದ್ದಾರೆ ಫ್ಯಾನ್ಸ್. ಕನ್ನಡದ ಆಲಿಯಾ ಭಟ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಇತ್ತೀಚೆಗೆ ಫೋಟೋಶೂಟ್ವೊಂದಕ್ಕೆ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ ಆಗಿತ್ತು. ಅದಕ್ಕೆ ಖಡಕ್ ಆಗಿ ಚೈತ್ರಾ ರಿಯಾಕ್ಟ್ ಮಾಡಿದ್ದರು. ದೇವರ ಹಾಡು ಹಾಡ್ತಾರೆ ಆದರೆ ಹಾಕುವ ಬಟ್ಟೆ ಈ ತರಹ ಎಂದು ಕಾಮೆಂಟ್ ಮಾಡುವವರಿಗೆ ನಟಿ ತಕ್ಕ ಉತ್ತರ ನೀಡಿದ್ದರು.
ಬೇರೇ ಮನೆ ಹೆಣ್ಣು ಮಗಳ ಮರ್ಯಾದೆ ತೆಗೆಯಬೇಕು ಎಂದು ಪಣ ತೊಟ್ಟವರಿಗೆ ಏನು ಹೇಳೋದು ಅಂತಾ ನಟಿ ಗರಂ ಆಗಿದ್ದರು. ನನಗೆ ಯಾವ ವಿಚಾರ ತಪ್ಪು ಅಥವಾ ಸರಿ. ಎಲ್ಲಿ ಯಾವ ತರಹ ಇರಬೇಕು ಅನ್ನೋದು ಚೆನ್ನಾಗಿ ಗೊತ್ತು. ನಾನು ಬೆಳೆದು ಹಾದಿಯಲ್ಲಿ ನನ್ನ ಪೋಷಕರು ಮತ್ತು ಶಿಕ್ಷಕರು ನನಗೆ ಕಲಿಸಿ ಕೊಟ್ಟಿದ್ದಾರೆ ಎಂದು ನಟಿ ಪ್ರತಿಯುತ್ತರ ನೀಡಿದ್ದರು.