ಬೆಳಗಾವಿ : ಕನ್ನಡ ಮಾತನಾಡು ಅಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಪೊಲೀಸರು ಟ್ವಿಸ್ಟ್ ಕೊಟ್ಟಿದ್ದಾರೆ. ಇದೀಗ ಹಲ್ಲೆಗೊಳಾಗಿರುವ ಕಂಡಕ್ಟರ್ ಮೇಲೆಯೇ ಫೋಕ್ಸೋ ಕೇಸ್ ದಾಖಲಿಸಿದ್ದಾರೆ.
ಹೌದು, ಮಾರಿಹಾಳ ಠಾಣೆಯಲ್ಲಿ ಹಲ್ಲೆಗೊಳಗಾದ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಮೇಲೆ ಪೋಕ್ಸೊ ಕೇಸ್ ದಾಖಲಿಸಲಾಗಿದೆ. ಬಸ್ ನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಅಂತಾ ಕೇಸ್ ದಾಖಲು ಮಾಡಿದ್ದಾರೆ. ರಾತ್ರಿವರೆಗೂ ಸಹ ಅತ್ಯಾಚಾರ ಯತ್ನದ ಸುದ್ದಿಯೇ ಎಲ್ಲೂ ಕೂಡ ಪ್ರಸ್ತಾವವಾಗಿರಲಿಲ್ಲ. ಈ ಹಲ್ಲೆ ಪ್ರಕರಣ ಚರ್ಚೆಯಾಗುತ್ತಿದ್ದಂತೆ, ಕಂಡಕ್ಟರ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಮಧ್ಯರಾತ್ರಿ ಪೋಕ್ಸೊ ಕೇಸ್ ದಾಖಲಿಸಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕನ್ನಡ ಮಾತಾಡು ಅಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ; ಮರಾಠಿ ಯುವಕರ ಗೂಂಡಾಗಿರಿ
ಬಸ್ ನಲ್ಲಿದ್ದ ಯುವತಿ ಕಂಡಕ್ಟರ್ ಮಹದೇವಗೆ ಟಿಕೆಟ್ ಕೊಡುವಂತೆ ಮರಾಠಿಯಲ್ಲಿ ಹೇಳಿದ್ದಾಳೆ. ಯುವತಿಯೊಂದಿಗ್ಗೆ ಯುವಕನೊಬ್ಬ ಪ್ರಯಾಣ ಮಾಡುತ್ತಿದ್ದರಿಂದ ಎರಡು ಟಿಕೆಟ್ ಕೇಳಿದ್ದಾಳೆ. ಮರಾಠಿ ಬರುವುದಿಲ್ಲ ನನಗೆ ಕನ್ನಡದಲ್ಲಿ ಹೇಳುವಂತೆ ಕೇಳಿದ್ದಕ್ಕೆ ಜನರನ್ನ ಕರೆಸಿ ಚಲಿಸುತ್ತಿರುವ ಬಸ್ ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಕಂಡಕ್ಟರ್ ಆರೋಪಿಸಿದ್ದರು. ಹಲ್ಲೆಗೆ ಒಳಗಾದ ಕಂಡಕ್ಟರ್ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದಾರೆ.