ವಿಜಯವಾಡ:- ತಿರುಪತಿ ಲಡ್ಡು ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪ್ರಧಾನಿಗೆ ಮಾಜಿ ಸಿಎಂ ಜಗನ್ ಪತ್ರ ಬರೆದಿದ್ದಾರೆ.
JOB ಸರ್ಚ್ ಮಾಡ್ತಿದ್ದೀರಾ!? ಇಲ್ಲಿದೆ ಸುವರ್ಣಾವಕಾಶ, ಬೇಗ ಅಪ್ಲೈ ಮಾಡಿ!
ಹಾಲಿ ಸರ್ಕಾರದ ವೈಫಲ್ಯಗಳನ್ನು ಬಚ್ಚಿಡಲು ಮುಖ್ಯಮಂತ್ರಿಗಳು ಆಡುತ್ತಿರುವ ನಾಟಕ ಇದು. ದೇವರ ಹೆಸರಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ. ವಿಶ್ವಾದ್ಯಂತ ಇರುವ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿದ್ಧಾರೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಸಿಎಂ ನಾಯ್ಡು ವಿರುದ್ಧ ಜಗನ್ ಟೀಕಾಪ್ರಹಾರ ಮಾಡಿರುವುದು ತಿಳಿದುಬಂದಿದೆ.
ದನಗಳು ಮತ್ತು ಹಂದಿಗಳ ಕೊಬ್ಬಿನ ಕಲಬೆರಕೆಯ ತುಪ್ಪದಿಂದ ತಿರುಪತಿಯಲ್ಲಿ ಲಡ್ಡು ಪ್ರಸಾದವನ್ನು ತಯಾರಿಸಲಾಗಿದೆ ಎನ್ನುವುದು ಈಗಿರುವ ಆರೋಪ. ಲಡ್ಡು ತಯಾರಿಸಲು ಸಬರಾಜಾಗುವ ತುಪ್ಪದ ಸ್ಯಾಂಪಲ್ನ ಪರೀಕ್ಷೆಯಲ್ಲಿ ದನ ಮತ್ತು ಹಂದಿಯ ಮಾಂಸದ ಕೊಬ್ಬಿನ ಅಂಶಗಳನ್ನು ಬಳಸಿರುವುದು ದೃಢಪಟ್ಟಿದೆ. ಗುಜರಾತ್ನ ಲ್ಯಾಬ್ವೊಂದರಲ್ಲಿ ಇದರ ಪರೀಕ್ಷೆ ಮಾಡಲಾಗಿತ್ತು.
ಜಗನ್ಮೋಹನ್ ರೆಡ್ಡಿ ಸಿಎಂ ಆಗಿದ್ದ ಅವಧಿಯಲ್ಲಿ ತಿರುಪತಿ ಲಡ್ಡುವಿನ ಗುಣಮಟ್ಟ ಸರಿ ಇಲ್ಲ ಎಂದು ಟಿಡಿಪಿ ಚುನಾವಣೆಗೆ ಮುನ್ನವೇ ಸಾಕಷ್ಟು ಕಾಲದಿಂದ ಆರೋಪಿಸುತ್ತಾ ಬಂದಿತ್ತು. ನಾಯ್ಡು ಸಿಎಂ ಆದ ಬಳಿಕ ಟಿಟಿಡಿಯ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಬೇರೊಂದು ಮಂಡಳಿ ರಚಿಸಿ, ಲಡ್ಡುವಿನ ಗುಣಮಟ್ಟದ ಪರೀಕ್ಷೆ ನಡೆಸಿದ್ದರು. ಈ ವೇಳೆ, ಲಡ್ಡು ತಯಾರಿಕೆಯಲ್ಲಿ ಬಳಸಲಾದ ತುಪ್ಪವು ಅಶುದ್ಧವೆಂಬುದು ಸಾಬೀತಾಗಿದೆ
ಈಗ ಗುಜರಾತ್ನ ಎನ್ಡಿಡಿಬಿ ಲ್ಯಾಬ್ನಲ್ಲಿ ಪರೀಕ್ಷೆ ನಡೆಸಲಾದ ತುಪ್ಪದ ಸ್ಯಾಂಪಲ್ ಅನ್ನು ಟಿಟಿಡಿಯೂ ಪರೀಕ್ಷೆ ನಡೆಸಿತ್ತು. ಗುಣಮಟ್ಟ ಸರಿ ಇಲ್ಲದ್ದರಿಂದ ಸ್ಯಾಂಪಲ್ ತಿರಸ್ಕರಿಸಿತ್ತು. ಈ ತುಪ್ಪವನ್ನು ಪ್ರಸಾದ ತಯಾರಿಕೆಗೆ ಬಳಸಿಯೇ ಇರಲಿಲ್ಲ ಎಂದು ಮಾಜಿ ಸಿಎಂ ವೈ.ಎಎಸ್. ಜಗನ್ ಮೋಹನ್ ರೆಡ್ಡಿ ವಾದಿಸಿದ್ದಾರೆ.
ದೇವಸ್ಥಾನದಲ್ಲಿ ಬಳಸಲಾಗುವ ತುಪ್ಪದ ಖರೀದಿ ಮತ್ತು ಗುಣಮಟ್ಟ ಪರೀಕ್ಷೆಗೆ ಸುವ್ಯವಸ್ಥೆ ಇದೆ. ಹಿಂದಿನಿಂದ ನಡೆಸಿಕೊಂಡು ಬರಲಾದ ವಿಧಾನಗಳನ್ನು ತಮ್ಮ ಆಡಳಿತದಲ್ಲೂ ಮುಂದುವರಿಸಲಾಗಿತ್ತು. ಗುಣಮಟ್ಟ ಪರೀಕ್ಷೆಯಲ್ಲಿ ಒಂದು ಸ್ಯಾಂಪಲ್ನಲ್ಲಿ ದೋಷ ಕಂಡು ಬಂದರೆ ಇಡೀ ಟ್ಯಾಂಕರ್ ಅನ್ನು ತಿರಸ್ಕರಿಸಲಾಗುತ್ತಿತ್ತು ಎಂದು ಜಗನ್ ಸ್ಪಷ್ಟಪಡಿಸಿದ್ದಾರೆ