ತಿರುಮಲ ಭಕ್ತರೇ, ಈ ತಪ್ಪು ಮಾಡಿದ್ರೆ ಟಿಕೆಟ್ ಇದ್ರೂ ದರ್ಶನ ಸಿಗಲ್ಲ ಎಂದು ಹೇಳಲಾಗುತ್ತಿದೆ. ಭಾರೀ ಜನದಟ್ಟಣೆಯಿಂದ ತಿರುಮಲಕ್ಕೆ ಹೋದವರಿಗೆಲ್ಲ ತಿಮ್ಮಪ್ಪನ ದರ್ಶನ ಸಿಕ್ಕೇಬಿಡುತ್ತೆ ಎಂಬ ಗ್ಯಾರಂಟಿ ಇಲ್ಲ. ಕಾರಣಾಂತರಗಳಿಂದ ನಿತ್ಯ ನೂರಾರು ಮಂದಿಗೆ ದೇವರ ದರ್ಶನ ಸಾಧ್ಯವಾಗುತ್ತಿಲ್ಲ ಎಂಬ ಸುದ್ದಿ ಹೊರ ಬಿದ್ದಿದೆ.
T20 world Cup: ಇವರು ಕೋಚ್ ಆದ್ರೆ ಕಿಂಗ್ ಕೊಹ್ಲಿಯ ಕ್ರಿಕೆಟ್ ಕೆರಿಯರ್ ಮುಗಿಯುತ್ತಾ!?
ವಿಶಾಖಪಟ್ಟಣದ ನಿವಾಸಿಯಾದ ಶ್ರೀನಿವಾಸ್ ತಮ್ಮ ಸ್ನೇಹಿತನ ಮೂಲಕ ಬ್ರೋಕರ್ ರಘುಸಾಯಿ ತೇಜಾ ಅವರನ್ನು ಸಂಪರ್ಕಿಸಿದರು. ಆ ದಲ್ಲಾಳಿ ಆಸ್ಕರ್ ರೇಂಜ್ನಲ್ಲಿ ಕೆಲಸ ಮಾಡುತ್ತಿದ್ದ. 4 ವಿಐಪಿ ಬ್ರೇಕ್ ದರ್ಶನಕ್ಕೆ 17,000 ರೂ. ಬೇಡಿಕೆಯಿಟ್ಟಾಗ ಶ್ರೀನಿವಾಸ್ ಆ ಹಣವನ್ನು ಕಳುಹಿಸಿದರು. ಬಳಿಕ ವಿಐಪಿ ಬ್ರೇಕ್ ಟಿಕೆಟ್ಗಳನ್ನು ಶ್ರೀನಿವಾಸ್ ಸ್ವೀಕರಿಸಿದರು. ಈ ಟಿಕೆಟ್ಗಳ ಮೂಲಕ ದರ್ಶನಕ್ಕೆ ತಿರುಮಲಕ್ಕೆ ತೆರಳಿದರು.
ವೈಕುಂಠಂ ಕ್ಯೂ ಕಾಂಪ್ಲೆಕ್ಸ್ನಲ್ಲಿರುವ ಟಿಕೆಟ್ ಸ್ಕ್ಯಾನಿಂಗ್ ಪ್ರದೇಶಕ್ಕೆ ಹೋದ ನಂತರ ಶ್ರೀನಿವಾಸ್ ಅವರ ಟಿಕೆಟ್ ನೀಡಿದರು. ಆದರೆ ಆ ಟಿಕೆಟ್ಗಳನ್ನು ಸ್ಕ್ಯಾನ್ ಮಾಡಲು ಸಾಧ್ಯವಾಗಿಲ್ಲ. ದೇವಸ್ಥಾನದ ಸಿಬ್ಬಂದಿ ಮತ್ತೆ ಪ್ರಯತ್ನಿಸಿದರೂ ಸ್ಕ್ಯಾನ್ ವಿಫಲವಾಯಿತು.
ಇದನ್ನು ಗಮನಿಸಿದ ಟಿಟಿಡಿ ಸಿಬ್ಬಂದಿ ಟಿಕೆಟ್ಗಳನ್ನು ಎಚ್ಚರಿಕೆಯಿಂದ ಗಮನಿಸಿದರು. ಆಗ ವಿಷಯ ತಿಳಿಯಿತು. ಹಳೆಯ ವಿಐಪಿ ಬ್ರೇಕ್ ಟಿಕೆಟ್ ಗಳ ಹೆಸರು ಮತ್ತು ದಿನಾಂಕವನ್ನು ಮಾರ್ಫ್ ಮಾಡಿ ಬ್ರೋಕರ್ ಶ್ರೀನಿವಾಸ್ ಅವರಿಗೆ ನಕಲಿ ಟಿಕೆಟ್ ನೀಡಿರುವುದು ಗೊತ್ತಾಗಿದೆ.
ಹೀಗೆ ನಕಲಿ ಟಿಕೆಟ್ ನೀಡುವ ಮೂಕ ತಿರುಪತಿ ತಿಮ್ಮಪ್ಪನ ಭಕ್ತರನ್ನು ಮೋಸಗೊಳಿಸುವ ದಂದೆ ಎಗ್ಗಿಲ್ಲದೇ ನಡೆಯುತ್ತಿದೆ. ಈ ಕುರಿತು ಟಿಟಿಡಿ ಆಗಾಗ ಎಚ್ಚರಿಕೆಯ ಮಾಹಿತಿಯನ್ನು ಸಹ ಭಕ್ತರಿಗೆ ನೀಡುತ್ತದೆ.