ಹುಬ್ಬಳ್ಳಿ:ಸಿಎಂ ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಸಮಾವೇಶಕ್ಕೆ ಸಾಕಷ್ಟು ವಿರೋಧಗಳ ನಡುವೆಯು ಸಚಿವ ಆರ್ ಬಿ ತಿಮ್ಮಾಪುರ ಸಿಎಂ ಪರ ಬ್ಯಾಟಿಂಗ್ ಬಿಸಿದ್ದಾರೆ.ವಿರೋಧ ಮಾಡಿದವರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ ಅದು ಅವರ ವಿಚಾರ ಆದ್ರೆ ಸ್ವಾಭಿಮಾನಿ ಸಮಾವೇಶ ಮಾಡೋದರಲ್ಲಿ ತಪ್ಪೇನಿದೆ ಅಂತಾ ಪ್ರತಿಕ್ರಿಯೆ ನೀಡಿದರು.
ದಾಳಿಗಳು ನಮಗೆ ಇನ್ನಷ್ಟು ಶಕ್ತಿ ಕೊಡುತ್ತವೆ: ವಂಚನೆ ಆರೋಪಕ್ಕೆ ಗೌತಮ್ ಅದಾನಿ ತಿರುಗೇಟು
ರಾಜ್ಯದಲ್ಲಿರುವ ಬೇರೆ ಬೇರೆ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅದು ಬಿಜೆಪಿ ಸರ್ಕಾರ ಇದ್ದಾಗಲೂ ಇದ್ದಾಗಲೂ ಇದೆ ನಮ್ಮ ಸರ್ಕಾರ ಇದ್ದಾಗಲೂ ಇದೆ.ಈ ಭ್ರಷ್ಟಾಚಾರ ವ್ಯವಸ್ಥೆ ನೋಡಿ ನಮಗೂ ಕೂಡಾ ಬೇಸರ ವಾಗಿದೆ.ಹೀಗಾಗಿ ಭ್ರಷ್ಟಾಚಾರ ನಿವಾರಣೆ ಮಾಡಲು ಬೇರೆ ಬೇರೆ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಬಿಜೆಪಿಗರು ಕಾಂಗ್ರೆಸ್ ಪಕ್ಷದಲ್ಲಿ ಸರಿ ಇಲ್ಲ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ ಆದ್ರೆ ಅವರಲ್ಲಿಯೇ ಸಾಕಷ್ಟು ಒಡಕುಗಳು ಇದೆ ಬಿಜೆಪಿಯ ಮನೆಯೊಂದು ಮೂರು ಬಾಗಿಲು ರೀತಿಯಲ್ಲಿ ಆಗಿದೆ ಅಂತಾ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದ್ದಾರೆ.