ಬಾಳೆಹಣ್ಣಿನಿಂದ ರುಚಿರುಚಿಯಾದ ಬ್ರೇಕ್ಫಾಸ್ಟ್ ಕೂಡ ಆರೋಗ್ಯಕರವಾಗಿ ತಯಾರು ಮಾಡಬಹುದು. ಹಿಸುಕಿದ ಮಾಗಿದ ಬಾಳೆಹಣ್ಣುಗಳನ್ನು ನಿಮ್ಮ ಪ್ಯಾನ್ಕೇಕ್ ಬ್ಯಾಟರ್ಗೆ ಸೇರಿಸಬಹುದು. ಇದು ರುಚಿಯಾಗಿರುತ್ತದೆ ಮತ್ತು ಆರೋಗ್ಯಕ್ಕೂ ಉತ್ತಮ. ಮಕ್ಕಳಿಗಂತೂ ಈ ಬ್ರೇಕ್ಫಾಸ್ಟ್ ಹೇಳಿ ಮಾಡಿಸಿದ್ದು.
ಮೊಸರು ಮತ್ತು ನಿಮ್ಮ ಮೆಚ್ಚಿನ ಮೇಲೋಗರಗಳಾದ ಹಣ್ಣುಗಳು, ಬೀಜಗಳು ಮತ್ತು ಜೇನುತುಪ್ಪದೊಂದಿಗೆ ಬಾಳೆಹಣ್ಣುಗಳನ್ನು ಮಿಶ್ರಣ ಮಾಡಿ ಬಾಳೆಹಣ್ಣಿನ ಸ್ಮೂಥಿ ಬೌಲ್ ಅನ್ನು ಬೆಳಗ್ಗಿನ ತಿಂಡಿಗೆ ರೆಡಿ ಮಾಡಿಕೊಳ್ಳಬಹುದು
ಬೆಳಗ್ಗೆ ಓಟ್ಸ್ ತಿನ್ನುವವರು ನಿಮ್ಮ ಓಟ್ಸಿಗೆ ಒಂದೆರೆಡು ಬಾಳೆಹಣ್ಣನ್ನು ಕತ್ತರಿಸಿ ಮಿಕ್ಸ್ ಮಾಡಿ ತಿನ್ನಬಹುದು. ಬಾಳೆಹಣ್ಣುಗಳು ಓಟ್ ಮೀಲ್ ನೊಂದಿಗೆ ರುಚಿಯಾಗಿರುತ್ತದೆ. ಓಟ್ಸ್ ಸಪ್ಪೆ ಸಪ್ಪೆ ಆಗಿರುವುದರಿಂದ ಈ ಹಣ್ಣು ನೈಸರ್ಗಿಕ ಸಿಹಿಯನ್ನು ನಿಮ್ಮ ಓಟ್ಮೀಲ್ಗೆ ನೀಡುತ್ತದೆ.
ಹಿಸುಕಿದ ಬಾಳೆಹಣ್ಣುಗಳು, ಮೊಟ್ಟೆಗಳು ಮತ್ತು ದಾಲ್ಚಿನ್ನಿ ಮಿಶ್ರಣದಲ್ಲಿ ಬ್ರೆಡ್ ಚೂರುಗಳನ್ನು ಅದ್ದಿ. ನಂತರ ಅದನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ, ಅದನ್ನು ಸ್ವಲ್ಪ ಜೇನುತುಪ್ಪ ಅಥವಾ ನಿಮ್ಮ ನೆಚ್ಚಿನ ಸಿರಪ್ನೊಂದಿಗೆ ಸೇರಿಸಿ ಮಾಡಿದರೆ ಬೆಳಗ್ಗಿನ ತಿಂಡಿಗೆ ಬಾಳೆಹಣ್ಣು ಫ್ರೆಂಚ್ ಟೋಸ್ಟ್ ರೆಡಿ. ಈ ರೆಸಪಿ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ
ರುಚಿಕರವಾದ ಮತ್ತು ಪ್ರೋಟೀನ್ ಪ್ಯಾಕ್ ಉಪಹಾರ ಇದಾಗಿದ್ದು, ಇದನ್ನು ತಯಾರಿಸಲು ಮೊದಲಿಗೆ ನಿಮ್ಮ ಟೋಸ್ಟ್ ಮೇಲೆ ಪೀನಟ್ ಬಟರ್ ಅನ್ನು ಸವರಿ ನಂತರ ಕತ್ತರಿಸಿದ ಬಾಳೆಹಣ್ಣುಗಳನ್ನು ಸೇರಿಸಿ ಮತ್ತು ಸ್ವಲ್ಪ ಜೇನುತುಪ್ಪವನ್ನು ಸೇರಿಸಿಕೊಂಡು ಸೇವಿಸಿ.
ಹಿಸುಕಿದ ಬಾಳೆಹಣ್ಣುಗಳು, ಚಿಯಾ ಬೀಜಗಳು ಮತ್ತು ಹಾಲನ್ನು ಒಟ್ಟಿಗೆ ಮಿಶ್ರಣ ಮಾಡಿ, ನಂತರ ಅದನ್ನು ರಾತ್ರಿಯಿಡೀ ಫ್ರಿಜ್ನಲ್ಲಿ ಬಿಡಿ. ಇಷ್ಟು ಮಾಡಿದರೆ ಬೆಳಗ್ಗೆ ಬಾಳೆಹಣ್ಣು ಚಿಯಾ ಪುಡಿಂಗ್ ಸವಿಯಲು ಸಿದ್ಧವಾಗಿರುತ್ತದೆ.
ಬಾಳೆ ಹಣ್ಣು ಮತ್ತು ಮೊಸರು ಪೋಷಣೆಯ ಪರಿಪೂರ್ಣ ಆಯ್ಕೆ. ಮೊಸರು, ಗ್ರಾನೋಲಾ ಮತ್ತು ಕತ್ತರಿಸಿದ ಬಾಳೆಹಣ್ಣುಗಳನ್ನು ಲೋಟದಲ್ಲಿ ಹಾಕಿ ಮಿಶ್ರಣ ಮಾಡಿದರೆ ಈ ಪಾಕವಿಧಾನ ತಯಾರಾಗುತ್ತದೆ.
ಕೆಲವು ಡ್ರೈಫ್ರೂಡ್ಸ್ ಜೊತೆಗೆ ಬಾಳೆಹಣ್ಣಿನ ಮಫಿನ್ಗಳನ್ನು ಮಾಡುವ ಮೂಲಕ ನೀವು ಉಪಹಾರವನ್ನು ಆನಂದಿಸಬಹುದು. ಇದನ್ನು ಅರ್ಜೆಂಟಿಗೆ ಮಾಡಿಕೊಳ್ಳಬಹುದು, ಮಕ್ಕಳಿಗೂ ಬಾಕ್ಸ್ಗೆ ಹಾಕಿಕೊಡಬಹುದು.
ಹಿಸುಕಿದ ಬಾಳೆಹಣ್ಣುಗಳು, ಓಟ್ಸ್ ಮತ್ತು ಸ್ವಲ್ಪ ಜೇನುತುಪ್ಪವನ್ನು ಬಳಸಿ ನೀವು ರುಚಿಕರವಾದ ಕುಕೀಗಳನ್ನು ತಯಾರಿಸಬಹುದು. ಇದು ಆರೋಗ್ಯಕರ ಮತ್ತು ಸುಲಭವಾದ ಬೆಳಗಿನ ತಿಂಡಿಯಾಗಿದೆ