ಮಂಡ್ಯ: ಸಾಲಬಾಧೆಯಿಂದ ಬೇಸತ್ತು ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾರ್ಗೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾರ್ಗೋನಹಳ್ಳಿ ಗ್ರಾಮದ ಪುಟ್ಟೇಗೌಡ (55) ಮೃತ ರೈತನಾಗಿದ್ದು,
ಅನ್ನದಾತರ ಮೊಗದಲ್ಲೂ ನಗು ತರಿಸಿದ ಗುಲಾಬಿ..! 1 ಲಕ್ಷ ರೂ. ಖರ್ಚು ಮಾಡಿದ್ರೆ 7 ಲಕ್ಷ ಲಾಭ ಸಿಗೋದು ಪಕ್ಕಾ!
2 ಎಕರೆ ಜಮೀನು ಹೋಂದಿದ್ದ ರೈತ ಕೃಷಿಗಾಗಿ 8 ಲಕ್ಷ ಸಾಲ ಮಾಡಿಕೊಂಡಿದ್ದರು. ಆದ್ರೆ ಫಸಲು ಕೈಗೆ ಬರಲಿಲ್ಲ, ಜೊತೆಗೆ ಸಾಲದ ಒತ್ತಡ ಹೆಚ್ಚಾಗಿತ್ತು. ಇದರಿಂದ ಮನನೊಂದ ರೈತ ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಇನ್ನೂ ಘಟನೆ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.