ಕೊಪ್ಪಳ: ಸಾಲಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಘಟನೆ.
ಮಹೇಶ್ ಕುದ್ರಿಕಟಗಿ(37) ಆತ್ಮಹತ್ಯೆಗೆ ಶರಣಾದ ರೈತ, ಸೋಮವಾರ ಸಂಜೆ ತನ್ನದೇ ಜಮೀನಿನಲ್ಲಿ ವಿಷ ಸೇವಿಸಿ ಮಹೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು
ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳಿದ್ದಾನೆ.
ರೈತ ಮಹೇಶ್ ತನ್ನ ಜಮೀನಿನಲ್ಲಿ ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಬೆಳದಿದ್ದ. ಆದರೇ, ಬರಗಾಲ ಹಿನ್ನೆಲೆಯಲ್ಲಿ ಬೆಳೆ ಕೈಕೊಟ್ಟಿತ್ತು ಬ್ಯಾಂಕ್ ನಿಂದ ಹಾಗೂ ಖಾಸಗಿಯವರಿಂದ ಬೆಳೆಯನ್ನು ನಂಬಿ ನಾಲ್ಕು ಲಕ್ಷ ಸಾಲ ಮಾಡಿಕೊಂಡಿದ್ದ. ಮಳೆ ಕೈಕೊಟ್ಟ ಹಿನ್ನೆಲೆ ಸಾಲವನ್ನು ಮರಳಿ ತೀರಿಸಲು ಆಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.