ದೊಡ್ಡಬಳ್ಳಾಪುರ: ಸಾಲ ಮಾಡಿ ಬಡ್ಡಿ ಕಟ್ಟಲಾಗದೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ರೋಜಿಪುರದಲ್ಲಿ ನಡೆದಿದೆ. ಪರ್ವೀಜ್ ಫಾಷ( 38 ) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದು, ದೊಡ್ಡಬಳ್ಳಾಪುರ ನಗರದ ರೋಜಿಪುರ ಬಡಾವಣೆಯ ನಿವಾಸಿಯಾದ ಪರ್ವೀಜ್ ಫಾಷ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ವೃತ್ತಿಯಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ ಪರ್ವೀಜ್ ಪಾಷ ಹಲವರಿಂದ ಬಡ್ಡಿಗೆ ಸಾಲವಾಗಿ ಹಣ ಪಡೆದುಕೊಂಡಿದ್ದ. ಸಾಲ ತೀರಿಸಲು ದಿಕ್ಕು ದೋಚದೆ ಮೂರು ದಿನ ಊಟ ಬಿಟ್ಟಿದ್ದರು. ನಂತರ ಅಂಗಡಿ ಮುಂದೆ ಸಾಲಗಾರರ ಕಾಟ ಹೆಚ್ಚಾಗಿ ಕಳೆದ ಭಾನುವಾರ ಮನೆಗೆ ಬಂದು ವಿಷ ಸೇವಿಸಿದ್ದರು. ಕೂಡಲೆ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾನೆ. ಇನ್ನು ಈ ಸಂಬಂಧ ದೊಡ್ಡಬಳ್ಖಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)