ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಕೂದಲೆಳೆ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿದೆ. ಸುಮಾರು 300 ಮಂದಿ ಪ್ರಯಾಣಿಕರನ್ನು ಹೊತ್ತು ಅಬುಧಾಬಿಗೆ ತೆರಳುತ್ತಿದ್ದ ಎತಿಹಾದ್ ಏರ್ವೇಸ್ ವಿಮಾನದ ಎರಡು ಟೈರ್ಗಳು ಸ್ಫೋಟಗೊಂಡಿದ್ದು ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದರು.
289 ಪ್ರಯಾಣಿಕರೊಂದಿಗೆ ಮೆಲ್ಬೋರ್ನ್ನಿಂದ ಅಬುಧಾಬಿಗೆ ಹೋಗುತ್ತಿದ್ದ EY 461 ವಿಮಾನದ ಟೈರ್ಗಳು ಟೇಕ್ಆಫ್ ಆಗುವ ಕೆಲವೇ ಕ್ಷಣಗಳ ಮೊದಲು ಸ್ಫೋಟಗೊಂಡಿದ್ದವು. ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ತುರ್ತು ಸೇವೆಗಳು ಬೋಯಿಂಗ್ 787 ವಿಮಾನವನ್ನು ಸುತ್ತುವರೆದಿದ್ದು ಸುರಕ್ಷತಾ ಕ್ರಮವಾಗಿ ಲ್ಯಾಂಡಿಂಗ್ ಗೇರ್ ಮೇಲೆ ರಕ್ಷಣಾತ್ಮಕ ಫೋಮ್ ಅನ್ನು ಇರಿಸಿದವು.
ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ನಮ್ಮ ತಂಡಗಳು ಸಾಧ್ಯವಾದಷ್ಟು ಬೇಗ ಅವರ ಮುಂದಿನ ಪ್ರಯಾಣವನ್ನು ಮುಂದುವರಿಸಲು ಅನುವು ಮಾಡಿಕೊಡಲು ಕೆಲಸ ಮಾಡುತ್ತಿವೆ. ಎತಿಹಾದ್ ಏರ್ವೇಸ್ ಯಾವುದೇ ಅನಾನುಕೂಲತೆಗಾಗಿ ಪ್ರಾಮಾಣಿಕವಾಗಿ ವಿಷಾದಿಸುತ್ತದೆ ಎಂದು ಟ್ವೀಟ್ ಮಾಡಿದೆ.