ಮಂಡ್ಯ: ಮಂಡ್ಯದಲ್ಲಿ ಮತ್ತೆ ಟಿಪ್ಪು ವಿಚಾರ ಬಾರೀ ಸದ್ದು ಮಾಡ್ತಿದೆ. ಡಿಸೆಂಬರ್ ನಲ್ಲಿ ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪು ಗೋಷ್ಠಿ ನಡಿಬೇಕು ಅಂತ ಕೆಲವ್ರು ಆಗ್ರಹ ಮಾಡಿದ್ರೆ, ಮತ್ತೊಂದುಕಡೆ ಹಿಂದುಪರ ಸಂಘಟನೆಗಳು ಅದೇಗೆ ಟಿಪ್ಪು ಗೋಷ್ಠಿ ಮಾಡ್ತಿರಾ,? ಅದನ್ನ ನಾವು ತಡ್ದೆ ತಡಿತಿವಿ ಅಂತ ಗುಟುರು ಹಾಕ್ತಿದ್ದಾರೆ. ಇದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ. ಇದೆ ಡಿಸೆಂಬರ್ 20,21 ಹಾಗೂ 22 ರಂದು ಮಂಡ್ಯ ನಗರದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಸರ್ಕಾರದ ಅನುದಾನ ಪಡೆದು ಸಮ್ಮೇಳನಕ್ಕೆ ಹೀಗಾಗಲೇ ಸಾಕಷ್ಟು ಸಿದ್ದತೆಗಳನ್ನ ಕೂಡ ಮಾಡಿಕೊಳ್ಳಲಾಗಿದೆ. ಆದ್ರೆ ಸಾಹಿತಿ, ಚಿಂತಕ ಜಗದೀಶ್ ಕೊಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಧ್ಯಕ್ಷ ಡಾ ಮಹೇಶ್ ಜೋಷಿ ವಿರುದ್ದ ವಾಗ್ದಾಳಿ ನಡೆಸಿದ್ದು, ಮೈಸೂರು ಪ್ರಾಂತ್ಯದಲ್ಲಿ ಟಿಪ್ಪು ಸುಲ್ತಾನ್ ನೀಡಿದ ಕೊಡುಗೆಯನ್ನ ಗಮನಿಸಿ ಸಮ್ಮೇಳನದ ವೇದಿಕೆಯಲ್ಲಿ ಟಿಪ್ಪು ವಿಚಾರಗೋಷ್ಠಿ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಸಿಗಲಿದೆ ಉಚಿತ ‘ಹೊಲಿಗೆ ಯಂತ್ರ’!
ಇನ್ನು ಮತ್ತೊಂದು ಕಡೆ ಜಗದೀಶ್ ಕೊಪ್ಪ ಆಗ್ರಹಕ್ಕೆ ಕೆಂಡಾಮಂಡಲರಾಗಿರೋ ಹಿಂದುಪರ ಸಂಘಟನೆಗಳ ಮುಖಂಡರು, ಟಿಪ್ಪು ವಿಚಾರ ಗೋಷ್ಠಿ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಟಿಪ್ಪು ಸುಲ್ತಾನ್ ಮತಾಂಧನಾಗಿದ್ದು, ಹಿಂದೆ ಮೈಸೂರು ಭಾಗದಲ್ಲಿ ಕನ್ನಡದ ವಿರುದ್ದ ಪರ್ಶಿಯನ್ ಭಾಷೆಯನ್ನ ಏರಿದ್ದಾನೆ. ಹೀಗಾಗೆ ಇಂದಿಗೂ ಸರ್ಕಾರಿ ಕಚೇರಿಗಳಲ್ಲಿ ಪರ್ಶಿಯನ್ ಪದಗಳನ್ನ ಬಳಸಲಾಗ್ತಿದೆ.
ಹೀಗಾಗಿ ಇಂತ ಕನ್ನಡ ವಿರೋಧಿಯ ವಿಚಾರ ಗೋಷ್ಠಿಯನ್ನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಸೋದು ಸರಿಯಲ್ಲ. ಒಂದು ವೇಳೆ ಸಮ್ಮೇಳನದ ವೇದಿಕೆಯಲ್ಲಿ ಟಿಪ್ಪು ಗೋಷ್ಠಿ ನಡೆಸಲು ಮುಂದಾದ್ರೆ ಅದನ್ನ ನಾವು ತಡ್ದೆ ತಡಿತಿವಿ ಅಂತ ಹಿಂದುಪರ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಇನ್ನು ಮಂಡ್ಯದಲ್ಲಿ ಈ ವಿಚಾರ ಈಗ ಸಾಕಷ್ಟು ಚೆರ್ಚೆಗೆ ಗ್ರಾಸವಾಗಿದ್ದು, ಜಿಲ್ಲಾಡಳಿತ ಎರಡು ಕಡೆಯವರನ್ನ ಕರೆದು ಸಮಾಧಾನಪಡಿಸುವ ಕೆಲಸ ಮಾಡಬೇಕಿದೆ. ಇಲ್ದಿದ್ರೆ ಸಮ್ಮೇಳನಕ್ಕೆ ಬರುವ ಲಕ್ಷಾಂತರ ಜನರ ಮುಂದೆ ಜಿಲ್ಲೆಯ ಮಾನ ಹರಾಜು ಆಗಲಿದೆ ಎಂದು ಜನ ಮಾತನಾಡಿಕೊಳ್ತಿದ್ದಾರೆ.