ಬೀದರ್: ಬಸವಣ್ಣನವರ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಆಗುವ ಕಾಲ ಬಂದೇ ಬರುತ್ತೆ ಎಂದು ಕಲ್ಯಾಣ ಪರ್ವದಲ್ಲಿ ಬಸವಲಿಂಗ ಪಟ್ಟದೇವರು ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಮತ್ತೆ ಲಿಂಗಾಯತ ಸ್ವತಂತ್ರ ಧರ್ಮದ ಕೂಗು ಮೊಳಗಿದೆ. ಬಸವಕಲ್ಯಾಣದ ಕಲ್ಯಾಣ ಪರ್ವ ವೇದಿಕೆ ಕಾರ್ಯಕ್ರಮದಲ್ಲಿ ಪಟ್ಟದೇವರು ಸ್ವಾಮೀಜಿ ಸ್ವತಂತ್ರ ಧರ್ಮದ ಕೂಗು ಎತ್ತಿದ್ದಾರೆ. ಬಸವಣ್ಣನವರ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಆಗಬಾರದು ಅಂತ ಅನೇಕ ಶಕ್ತಿಗಳು ವಿರೋಧ ಮಾಡುತ್ತಿವೆ. ಆದ್ರೆ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗುವ ಕಾಲ ಬಂದೇ ಬರುತ್ತೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಮೂತ್ರ ವಿಸರ್ಜನೆ ವೇಳೆ ಕೆಟ್ಟ ವಾಸನೆ ಬರುತ್ತಿದೆಯೇ..? ಹಾಗಾದ್ರೆ ಈ ಕಾಯಿಲೆಗಳ ಸೂಚನೆ ಇರಬಹುದು.!
200 ಸ್ವಾಮೀಜಿಗಳ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸರ್ಕಾರ ಕೆಲವೇ ದಿನಗಳಲ್ಲಿ ಬಸವಣ್ಣರನ್ನ ನಾಯಕ ಎಂದು ಘೋಷಣೆ ಮಾಡಿತು. ಅದೇ ರೀತಿ ಲಿಂಗಾಯತ ಸ್ವತಂತ್ರ ಧರ್ಮ ಆಗುವ ಕಾಲ ಬರುತ್ತೆ. ನಾವೆಲ್ಲಾ ನಿರಾಸೆಯಾಗದೇ ಸ್ವತಂತ್ರ ಧರ್ಮಕ್ಕೆ ಹೋರಾಡಬೇಕು ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಲಿಂಗಾಯತ ಜಾಗೃತಿ ಸಮಾವೇಶ ಮಾಡಬೇಕು ಎಂದು ಕರೆ ನೀಡಿದ್ದಾರೆ. 12ನೇ ಶತಮಾನದಲ್ಲೇ ಅನುಭವ ಮಂಟಪದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮುದ್ರೆ ಬಿದ್ದಿದೆ.
ಇನ್ನು ಸರ್ಕಾರದಲ್ಲಿ ಸ್ವತಂತ್ರ ಧರ್ಮದ ಮುದ್ರೆ ಬೀಳಬೇಕಿದೆ. ಲಿಂಗಾಯತ ಸ್ವತಂತ್ರ ಧರ್ಮ ಅಂತ ಘೋಷಣೆ ಆದ್ರೆ ನಮಗೆ, ನಮ್ಮ ಪರಿವಾರಗಳಿಗೆ ಅನುಕೂಲ ಆಗಲಿದೆ. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ, ಸ್ವತಂತ್ರ ಧರ್ಮ ಹೋರಾಟಕ್ಕೆ ಸ್ವಾಮಿಜೀ ಕರೆ ನೀಡಿದ್ದಾರೆ. ಬಸವಣ್ಣನವರ ಕಾಲದಿಂದ ಇಲ್ಲಿಯವರೆಗೂ ಲಿಂಗಾಯತ ಧರ್ಮಕ್ಕೆ ವಿರೋಧ ಮಾಡುವವರು ಇದ್ದೇ ಇದ್ದಾರೆ. ವಿರೋಧದ ಮಧ್ಯೆಯೂ 21ನೇ ಶತಮಾನದವರೆಗೆ ಜಾಗೃತ ಮಾಡುತ್ತಾ ಬಂದಿದ್ದು ಲಿಂಗಾಯತ ಸ್ವತಂತ್ರ ಧರ್ಮ ಮುದ್ರೆ ಪಡೆದೇ ತೀರೋಣ ಎಂದು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ.