ಹೊಸ ಹೊಸ ವಸ್ತುಗಳನ್ನು ಕಂಡು ಹಿಡಿಯುವುದರಲ್ಲಿ ಚೀನಿಯರು ಎಕ್ಸ್ ಪರ್ಟ್. ಇದೀಗ ಅದೇ ಸಾಲಿಗೆ ಮತ್ತೊಂದು ವಸ್ತುವನ್ನು ಕಂಡು ಹಿಡಿದಿದ್ದಾರೆ. ಹೌದು. ಚೀನಾ ದೇಶ ಇದೀಗ ಹುಲಿ ಮೂತ್ರವನ್ನು ಮಾರಾಟ ಮಾಡುವ ಮೂಲಕ ಸುದ್ದಿಯಾಗಿದೆ. ಹುಲಿ ಮೂತ್ರದಲ್ಲಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಇದೆ ಎಂದು ಹೇಳಿ ಮೃಗಾಲಯವೊಂದು ಹುಲಿ ಮೂತ್ರವನ್ನು ಮಾರಾಟ ಮಾಡಲು ಆರಂಭಿಸಿದೆ.
ಚುವಾನ್ ಪ್ರಾಂತ್ಯದಲ್ಲಿ, ಯಾನ್ ಬೈಫೆಂಗ್ಕ್ಸಿಯಾ ವನ್ಯಜೀವಿ ಮೃಗಾಲಯವು ಬಾಟಲ್ ಹುಲಿ ಮೂತ್ರವನ್ನು ಸಂಧಿವಾತ, ಉಳುಕು ಮತ್ತು ಸ್ನಾಯು ನೋವಿಗೆ ಪರಿಹಾರವಾಗಿ ಮಾರಾಟ ಮಾಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 250 ಎಂಎಲ್ ಸೈಬಿರಿಯನ್ ಹುಲಿ ಮೂತ್ರಕ್ಕೆ 50 ಯುವಾನ್ (ಅಂದಾಜು 596 ರೂ.) ಬೆಲೆಯನ್ನು ನಿಗದಿ ಮಾಡಿ ಮಾರಾಟ ಮಾಡುತ್ತಿದೆ.
ಹುಲಿ ಮೂತ್ರಕ್ಕೆ ಬಿಳಿ ವೈನ್, ಶುಂಠಿ ಚೂರನ್ನು ಹಾಕಿ ಮಿಶ್ರಣ ಮಾಡಿ ನೋವು ಇರುವ ಜಾಗಕ್ಕೆ ಹಾಕಿದರೆ ನೋವು ಕಡಿಮೆಯಾಗುತ್ತದೆ ಎಂದು ತನ್ನ ಪ್ರಚಾರದ ಲೇಬಲ್ನಲ್ಲಿ ಮುದ್ರಿಸಿತ್ತು. ಅಷ್ಟೇ ಅಲ್ಲದೇ ಹುಲಿ ಮೂತ್ರವನ್ನು ಕುಡಿಯಲೂಬಹುದು ಎಂದು ಹೇಳಿತ್ತು. ಆದರೆ ಅಲರ್ಜಿಯಾದರೆ ಕುಡಿಯುವುದನ್ನು ನಿಲ್ಲಿಸುವಂತೆ ಲೇಬಲ್ ನಲ್ಲಿ ಉಲ್ಲೇಖಿಸಿದೆ.
ಚೀನೀ ಸಂಸ್ಕೃತಿಯಲ್ಲಿ ಬಹಳ ಹಿಂದಿನಿಂದಲೂ ಹುಲಿಯನ್ನು ಶಕ್ತಿಯ ಲಾಂಛನಗಳಾಗಿ ನೋಡಲಾಗುತ್ತದೆ. ಪ್ರಾಚೀನ ವೈದ್ಯಕೀಯ ಸಾಹಿತ್ಯದಲ್ಲಿ ಹುಲಿ ಮೂಳೆಗಳನ್ನು ಸಂಧಿವಾತ ಮತ್ತು ಅಪಸ್ಮಾರ ಸೇರಿದಂತೆ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಿದ ಬಗ್ಗೆ ಉಲ್ಲೇಖವಿದ್ದು ಇದೀಗ ಮತ್ತೆ ಹುಲಿ ಮೂತ್ರವನ್ನು ಮಾರಾಟ ಮಾಡುವ ಮೂಲಕ ಚೀನಾ ಸುದ್ದಿಯಾಗಿದೆ.