ಬೆಂಗಳೂರು:- ಬೆಂಗಳೂರಿನ ಜೀವನಾಡಿಯಾಗಿದ್ದ ನಮ್ಮ ಮೆಟ್ರೋ ಇದೀಗ ಬೆಲೆ ಏರಿಕೆ ಶಾಕ್ನಿಂದ ಸಿಲಿಕಾನ್ ಸಿಟಿ ಮಂದಿಯ ಕೋಪಕ್ಕೆ ಗುರಿಯಾಗಿದೆ. ಜನರಿಂದ ವಿರೋಧ ವ್ಯಕ್ತವಾದ ಕಾರಣಕ್ಕೆ ಏರಿದ್ದ ದರವನ್ನು ಅಲ್ಪವಷ್ಟೇ ಇಳಿಸಿದ್ದರೂ ಕೋಪ ತಣ್ಣಗಾಗಲಿಲ್ಲ. ಇಲ್ಲಿವರೆಗೆ ನೆಮ್ಮದಿಯ ಪ್ರಯಾಣಕ್ಕಾಗಿ ಮೆಟ್ರೋ ಹತ್ತುತ್ತಿದ್ದವರು ಇದೀಗ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ದರಿಂದ ಜನರು ಇದೀಗ ಸ್ವಂತ ವಾಹನ ಹಾಗೂ ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ವೀಕೆಂಡ್ನಲ್ಲಿಯೂ ಮೆಟ್ರೋದಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿ ಹೊಡೆಯುತ್ತಿವೆ.
ಮೊದಲು ವೀಕೆಂಡ್ನಲ್ಲಿ ಓರಿಯನ್ ಮಾಲ್, ಇಸ್ಕಾನ್ ಟೆಂಪಲ್ಗೆ ಬರುವ ಜನರು ಹೆಚ್ಚಾಗಿ ಮೆಟ್ರೋದಲ್ಲಿ ಬರುತ್ತಿದ್ದರು. ಆದರೆ ಇವತ್ತು ಮೆಟ್ರೋದಲ್ಲಿ ಪ್ರಯಾಣಿಕರಿಲ್ಲ. ಹೀಗಾಗಿ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದ ಬಳಿ ಪ್ರಯಾಣಿಕರೇ ಇಲ್ಲದಂತಾಗಿದ್ದು, ಮೆಟ್ರೋದಲ್ಲಿ ಪ್ರಯಾಣ ಮಾಡಲು ಜನರ ಹಿಂಜರಿಯುತ್ತಿದ್ದಾರೆ.