ಬೆಂಗಳೂರು: ಹಾಲಿ ಸಂಸದ ಪ್ರತಾಪ್ ಸಿಂಹಗೆ ಲೋಕಸಭೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಲು ಕಮಲ ನಾಯಕರು ತೀರ್ಮಾನ ಮಾಡಿದ್ದಾರೆ.ಸಂಸತ್ ನಲ್ಲಿ ಸ್ಮೋಕ್ ಬಾಂಬ್,ಕ್ಷೇತ್ರದಲ್ಲಿ ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗದುಕೊಳ್ಳೋದೇ ಇರೋದು ಪ್ರತಾಪ್ ಸಿಂಹಗೆ ಮುಳುವಾಗಿದೆ ಎನ್ನಲಾಗಿದೆ.
ಅಖಾಡ ನಿಧಾನವಾಗಿ ರಂಗೇರುತ್ತಿದೆ.ಇತ್ತ ರಣಾಂಗಕ್ಕೆ ಕಲಿಗಳನ್ನ ರೆಡಿ ಮಾಡೋ ಕಾಯಕದಲ್ಲಿ ರಾಜ್ಯದ ಮೂರು ಪಕ್ಷದ ನಾಯಕರು ಬ್ಯುಸಿಯಾಗಿದ್ದಾರೆ.. ಇದೀಗ ಎಲ್ಲಾರ ಚಿತ್ರ ಮೈಸೂರಿನತ್ತ ನೆಟ್ಟಿದ್ದು ಬಿಜೆಪಿಯಿಂದ ಯಾರು ಮೈಸೂರ ಮಹಾರಾಜ ಅನ್ನೋದೇ ಕುತೂಹಲಕ್ಕೆ ಕಾರಣವಾಗಿದೆ..ಯಾಕೆಂದರೆ ಹಾಲಿ ಸಂಸದ ಪ್ರತಾಪ್ ಸಿಂಹಗೆ ಈ ಬಾರೀ ಟಿಕೆಟ್ ಮಿಸ್ ಆಗುತ್ತೆ ಎಂಬ ಗುಸುಪಿಸು ಜಾಸ್ತಿಯಾಗಿರೋ ಈ ಕುತೂಹಲಕ್ಕೆ ಕಾರಣವಾಗಿದೆ.
Loksabha Election: ಡಿಎಂಕೆ ಜೊತೆ ಮತ್ತೆ ಕೈ ಜೋಡಿಸಿದ ಕಮಲ್ ಹಾಸನ್!
ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪುವ ಭೀತಿಯಿದೆ.. ರಾಜ್ಯ ಬಿಜೆಪಿ ಮಾಡಿರೋ ಪಕ್ಷದ ಆತಂರಿಕ ಅಭಿಪ್ರಾಯ ಸಂಗ್ರಹದಲ್ಲಿ ಪ್ರತಾಪ್ ಸಿಂಹ ವಿರುದ್ಧ ಹೇಳಿಕೆಗಳು ಕೇಳಿ ಬಂದಿವೆಯಂತೆ.. ತಳ ಮಟ್ಟದ ಕಾರ್ಯಕರ್ತರನ್ನ ಹಾಲಿ ಸಂಸದರು ಕಡೆಗಣಿಸಿದ್ದಾರೆ.. ಅದರಲ್ಲೂ ಸ್ಥಳೀಯ ನಾಯಕರನ್ನ ವಿಶ್ವಾಸಕ್ಕೆ ತಗೆದುಕೊಳ್ಳುವಲ್ಲಿ ಸಿಂಹ ವಿಫಲರಾಗಿದ್ದಾರೆ.. ಮಾಜಿ ,ಹಾಲಿ ಶಾಸಕರುಗಳ ಜೊತೆ ಮುಸುಕಿನ ಗುದ್ದಾಟ ಮುಂದುವರೆಸಿದ್ದಾರೆ ಹೀಗಾಗಿ ಮೈಸೂರು- ಕೊಡಗು ಕ್ಷೇತ್ರದಿಂದ ಯಾರಿಗೆ ಟಿಕೇಟ್ ಕೊಟ್ರೂ ಬಿಜೆಪಿಯಿಂದ ಗೆಲ್ತಾರೆ.. ಹಾಗಾಗಿ ಇವ್ರಿಗೆ ಯಾಕೆ ಟಿಕೆಟ್ ಕೊಡ್ಬೇಕು.. ಈಗಾಗಲೇ ಎರಡು ಬಾರಿ ಅವಕಾಶ ಕೊಟ್ಟಿರುವು ಸಾಕು.
ಬೇರೆಯವರನ್ನೂ ಪಕ್ಷದ ಗುರುತಿಸಿ ಟಿಕೆಟ್ ನೀಡಲಿ.ಇದಲ್ಲದೆ ಒಕ್ಕಲಿಗ ನಾಯಕರ ವಿರೋಧ ಸಹ ಕಟ್ಟಿಕೊಂಡಿದ್ದಾರೆ. ದೇವೇಗೌಡ್ರು ಮತ್ತು ಕುಮಾರಸ್ವಾಮಿ ವಿರುದ್ಧವೂ ಹೇಳಿಕೆ ನೀಡಿದ್ದಾರೆ.ಇದು ಈ ಭಾಗದ ಒಕ್ಕಲಿಗರ ಕೆಗ್ಗಣ್ಣಿಗೆ ಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ ಸ್ಥಳೀಯ ನಾಯಕರು..
ಇನ್ನು ಇನ್ನೇರಡು ದಿನದಲ್ಲಿ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುತ್ತೆ.. ಹೀಗಾಗಿ ಮೈಸೂರು ಲೋಕಾ ಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಒಲಿಯುತ್ತೆ ಅಂತ ಕುತೂಹಲ ಹೆಚ್ಚಾಗಿದೆ.. ಮೂಲಗಳ ಪ್ರಕಾರ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಪ್ರತಾಪ್ ಸಿಂಹ ಹೆಸರು ಮಾತ್ರ ಶಿಫಾರಸು ಮಾಡಲಾಗಿದೆ.ಅದರೂ ಪ್ರತಾಪ್ ಸಿಂಹಗೆ ಈ ಬಾರೀಯ ಟಿಕೆಟ್ ಕೈತಪ್ಪುಸಾಧ್ಯತೆ ಇದೆ ಎನ್ನಲಾಗಿದೆ.. ಇವರ ಬದಲು
ರಾಜವಂಶದ ರಾಜಕುಮಾರ ಯದುವೀರ್ ಒಡೆಯರಿಗೆ ಟಿಕೆಟ್ ನೀಡ್ತಾರೆ ಎನ್ನಲಾಗಿದೆ.ಒಂದು ಪಕ್ಷ ಯದುವೀರ್ ಗೆ ಟಿಕೆ್ಟ ಕೊಟ್ಟರೆ ಅಕ್ಕ- ಪಕ್ಕದ ಲೋಕಾಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಪೂರಕವಾದ ವಾತಾವರಣ ನಿರ್ಮಾಣ ಆಗಲಿದೆ ಅನ್ನೋ ಲೆಕ್ಕಾಚಾರ ಬಿಜೆಪಿ ನಾಯಕರದು.ಹೀಗಾಗಿ ಪ್ರತಾಪ್ ಸಿಂಹ ಹೆ ಈ ಬಾರಿ ಟಿಕೆಟ್ ಮಿಸಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಇನ್ನು ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪುತ್ತಾ ಅನ್ನೋ ಮಧ್ಯಮದವರಿಗೆ ಪ್ರಶ್ನೆಗೆ ಬಿಜೆಪಿ ನಾಯಕರು ಜಾಣ ಉತ್ತರ ನೀಡಿದ್ದಾರೆ.ಅಚ್ಚರಿ ಅಭ್ಯರ್ಥಿ ಹಾಕುವ ಬಗ್ಗೆ ಚರ್ಚೆಯಾಗಿದೆ.ನಾಲ್ಕು ಗೋಡೆಗಳ ಮಧ್ಯೆ ಚರ್ಚೆಯಾಗಿರಯವ ವಿಚಾರ ಬಹಿರಂಗಪಡಿಸಲ್ಲ ಎಂದು ಪರೋಕ್ಷವಾಗಿ ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪುವ ಬಗ್ಗೆ ಆರ್ ಅಶೋಕ್, ವಿಜಯೇಂದ್ರ ಸುಳಿವು ನೀಡಿದ್ದಾರೆ.
ಒಟ್ಟಾರೆ, ಎರಡು ಬಾರಿ ಮೈಸೂರು- ಕೊಡಗು ಗದ್ದುಗೆ ಏರಿದ್ದ ಪ್ರತಾಪ್ ಸಿಂಹ ಈ ಬಾರಿ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.ಕ್ಷೇತ್ರದಲ್ಲಿ ವೈಯಕ್ತಿಕವಾಗಿ ಆಡಳಿತ ವಿರೋಧಿ ಅಲೆ ಇರೋ ಕಾರಣದಿಂದ ಟಿಕೆಟ್ ಕೊಡಬಾರದು ಎಂಬ ಚರ್ಚೆ ನಡೆದಿದೆ.ಜೊತೆಗೆ ಸಂಸತ್ ಮೇಲಿನ ಕಲರ್ ಬಾಂಬ್ ಪ್ರಕರಣದಿಂದ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ತೀವ್ರ ಮುಜುಗರ ಎದುರಿಸಬೇಕಾಗಿತ್ತು.ಈ ಹಿನ್ನಲೆಯಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ನೀಡುವ ವಿಚಾರದಲ್ಲಿ ದೆಹಲಿ ನಾಯಕರು ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ. ಪ್ರತಾಪ್ ಸಿಂಹಗೆ ಟಿಕೆಟ್ ಮೀಸ್ ಆಗಿದ್ದೆ ಆದಲ್ಲಿ ಯದುವೀರ್ ಬಿಜೆಪಿಯಿಂದ ಈ ಬಾರಿ ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗೋದು ಖಚಿತವಾಗಿದೆ
…………