ಚಾಮರಾಜನಗರ: ಭಾನುವಾರ ಸಂಜೆ ಗುಂಡ್ಲುಪೇಟೆ ತಾಲೂಕಿನ ಕೆಲವು ಭಾಗಗಳಲ್ಲಿ ಸುರಿದ ಸಿಡಿಲಬ್ಬರದ ಮಳೆಗೆ ಜನಜೀವನ ಅಸ್ಯವ್ಯಸ್ತ ಉಂಟಾಗಿದೆ.
ಉದ್ಘಾಟನೆ ಭಾಗ್ಯ ಕಾಣದೆ ಪಾಳುಬಿದ್ದ ಪುನೀತ್ ರಾಜ್ಕುಮಾರ್ ಮಲ್ಟಿ ಸೆಷ್ಪಾಲಿಟಿ ಆಸ್ಪತ್ರೆ…!
ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮಗಳಾದ ಬಾಚಹಳ್ಳಿ, ಅಂಕಹಳ್ಳಿ, ಬೊಮ್ಮಲಾಪುರ, ಮಾಲಾಪುರ, ಬೆಳವಾಡಿ, ಶೆಟ್ಟಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಶನಿವಾರ ಹಾಗೂ ಭಾನುವಾರ ಎರಡೂ ದಿನವೂ ಸಂಜೆ ಸುರಿದ ಧಾರಾಕಾರ ಮಳೆಗೆ ಕೆರೆ ಕಟ್ಟೆಗಳು ತುಂಬಿಹೋಗಿದೆ.
ಮಳೆಯ ರಭಸಕ್ಕೆ ರೈತರು ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕಳು ಪ್ರದೇಶದಲ್ಲಿ ಕೊರಕಲು ಉಂಟಾಗಿದ್ದು ರಸ್ತೆ ಓಣಿಗಳು ಮಳೆಯಿಂದ ತುಂಬಿ ಹರಿದ ಕಾರಣ ರಸ್ತೆ ದಾಟಲು ಜಮೀನಿಗೆ ತೆರಳಿದ್ದ ರೈತರು ಕೂಲಿ ಕಾರ್ಮಿಕ ಮಹಿಳೆಯರು ರೈತರು ಹರಸಾಹಸಪಟ್ಟಿದ್ದಾರೆ,
ಬಾಚಹಳ್ಳಿ ಗ್ರಾಮದಲ್ಲಿ ಮಳೆಯ ತೀವ್ರತೆಗೆ ಮನೆಯೊಳಗೆ ನೀರು ತುಂಬಿದ್ದು ಹೊರಹಾಕುವ ಹೊತ್ತಿಗೆ ಮನೆಯವರು ಸುಸ್ತಾಗಿದ್ದಾರೆ ಭಾನುವಾರ ಸಂಜೆ ಸುರಿದ ರಣ ಮಳೆಗೆ ಹಳ್ಳಕೊಳ್ಳಗಳು ಕೆರೆಕಟ್ಟೆಗಳಿ ಹುಕ್ಕಿ ಹರಿದಿವೆ.