ಪಶ್ಚಿಮ ಬಂಗಾಳ: ದೇಶಿ ನಿರ್ಮಿತ ಬಾಂಬ್ಗಳು ಸ್ಫೋಟಗೊಂಡು, ಮೂವರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಖಯರ್ತಲಾ ಪ್ರದೇಶದಲ್ಲಿ ನಡೆದಿದೆ. ಮಾಮುನ್ ಮೊಲ್ಲಾ ಎಂಬುವರ ಮನೆಯಲ್ಲಿ ಅಕ್ರಮವಾಗಿ ದೇಶೀ ನಿರ್ಮಿತ ಬಾಂಬ್ಗಳನ್ನು ತಯಾರಿಸಲಾಗುತ್ತಿತ್ತು ಎಂಬುದು ಸ್ಥಳೀಯರ ಆರೋಪ. ಭಾನುವಾರ ರಾತ್ರಿ ಸ್ಫೋಟಗೊಂಡಿದ್ದು, ಮೂವರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ.
Bengaluru Crime: ಸಿಲಿಕಾನ್ ಸಿಟಿಯಲ್ಲಿ ಡಬಲ್ ಮರ್ಡರ್! ಬೆಚ್ಚಿ ಬಿದ್ದ ಬೆಂಗಳೂರಿನ ಜನತೆ
ರಾತ್ರಿ ವೇಳೆ ದೊಡ್ಡ ಸ್ಫೋಟದ ಶಬ್ದ ಕೇಳಿಸಿತ್ತು. ಆದರೆ ಇದಕ್ಕೆ ಕಾರಣವೇನು ಎಂದು ತಿಳಿದಿರಲಿಲ್ಲ ಎಂದು ಸ್ಥಳೀಯರು ಹೇಳಿದ್ಧಾರೆ. ಸ್ಫೋಟದ ತೀವ್ರತೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಾಂಬ್ ತಯಾರಿಕೆ ವೇಳೆ ಏನೋ ಸಮಸ್ಯೆಯಾಗಿ ಸ್ಫೋಟಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.