ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಮೂರು ಕೊಲೆಗಳು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯ ಚಿಂತಾಮಣಿ ನಗರದಲ್ಲಿಯೇ ಮೂರು ಕೊಲೆ ನಡೆದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.
ಚಿಂತಾಮಣಿ ತಾಲೂಕಿನ ನಾಗದೇನಹಳ್ಳಿ ನಿವಾಸಿ ರಾಮಸ್ವಾಮಿ (48) ಕೊಲೆಯಾಗಿದ್ದು, ಜೆಸಿಬಿ ಮಾಲಿಕ ರಾಮಸ್ವಾಮಿಯನ್ನು ಜೆಸಿಬಿ ಚಾಲಕನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಇನ್ನೊಂದೆಡೆ ಶ್ರೀನಿವಾಸಪುರ ತಾಲೂಕಿನ ಗೌಡನತಾತಗಡ್ಡ ಗ್ರಾಮದ ಮುನೇಪ್ಪ (65)ನನ್ನು ಸಹ ಹತ್ಯೆ ಮಾಡಲಾಗಿದೆ. ಚಿಂತಾಮಣಿ ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಮತ್ತೊಬ್ಬ ಅನಾಮಿಕ ವ್ಯಕ್ತಿಯ ಕೊಲೆಯಾಗಿದ್ದು, ಜಿಲ್ಲಾ ಎಸ್ಪಿ ಕುಶಾಲ್ ಚೌಕ್ಟೆ ಚಿಂತಾಮಣಿಗೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ.
ಕೆಂಭಾವಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ; ಕಾಂಗ್ರೆಸ್ಗೆ ಗೆಲುವು
ರಾಮಸ್ವಾಮಿ ಕಳೆದ ರಾತ್ರಿ 9 ಗಂಟೆ ಸಮಯದಲ್ಲಿ ದೇವಸ್ಥಾನದಿಂದ ಮನೆಗೆ ಹೋಗುತ್ತಿದ್ದಾಗ ಜನನಿಬಿಡ ಪ್ರದೇಶದಲ್ಲಿ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ರಾಮಸ್ವಾಮಿ ಬಳಿ ಜೆಸಿಬಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಶ್ ಎನ್ನುವವರ ಮೇಲೆ ಅನುಮಾನ ವ್ಯಕ್ತವಾಗಿದೆ.
ಇತ್ತ ಚಿಂತಾಮಣಿ ನಗರದ ಯಜ್ಞವಲ್ಲೆ ದೇವಸ್ಥಾನದ ಬಳಿ, ತ್ಯಾಜ್ಯದಲ್ಲಿ ವೃದ್ದನ ಶವ ಪತ್ತೆಯಾಗಿದ್ದು, ರುಂಡ-ಮುಂಡ ಬೇರ್ಪಡಿಸಿ ಕೊಲೆ ಮಾಡಿದಂತೆ ಕಂಡು ಬಂದಿದೆ. ಮೃತ ವ್ಯಕ್ತಿಯನ್ನು ಕೋಲಾರ ತಾಲ್ಲೂಕಿನ ಗೌಡತಾತಗಡ್ಡ ನಿವಾಸಿ ಮುನೆಪ್ಪ ಎಂದು ಗುರುತಿಸಲಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ಸಂಬಂಧಿಕರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.