ಕಲಬುರಗಿ: ರಾಜ್ಯದಲ್ಲಿ ಭುಗಿಲೆದ್ದ ಮೂರು ಡಿಸಿಎಂ,ಗಳ ಕುರಿತಾದ ಬೇಡಿಕೆಗಳ ಚರ್ಚೆ ಹೈಕಮಾಂಡ್ ಅಂಗಳಕ್ಕೆ ಬಂದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಕಲಬುರಗಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಖರ್ಗೆ ಮೂವರು ಡಿಸಿಎಂ ಚರ್ಚೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನೇ ಕೇಳಿ ಎಂದು ಹೇಳಿದರು.
ಮೂರು ಡಿಸಿಎಂ ಕೇವಲ ಊಹಾಪೋಹ ಅಷ್ಟೇ. ಚುನಾವಣೆಯ ಸಮಯದಲ್ಲಿ ಈ ವಿಚಾರವನ್ನು ತರುವುದು ಅಪ್ರಸ್ತುತ ಅಂದ್ರು. ಅಷ್ಟೇಅಲ್ಲ ಸರ್ಕಾರ ಸರಿಯಾಗಿ ನಡೆಸಿ ನಾವು ಕೊಟ್ಟಿರುವ ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತರುವುದು ಮುಖ್ಯ ಗುರಿಯಾಗಿರಬೇಕು ಅಂತ ಸರ್ಕಾರಕ್ಕೆ ಸಲಹೆ ನೀಡಿದ್ರು.