ಬೆಂಗಳೂರು: ಕರ್ನಾಟಕ ರಾಜ್ಯದ ಉಚ್ಛ ನ್ಯಾಯಾಲಯದ ಕಲಾಪಕ್ಕೂ ಸೈಬರ್ ಕಳ್ಳರ ಹಾವಳಿ ಉಂಟಾಗಿದೆ. ಹೈಕೋರ್ಟ್ ಕಲಾಪದ ವೇಳೆ ವಿಡಿಯೋ ಕಾನ್ಫೆರೆನ್ಸ್ ಆ್ಯಪ್ ಅನ್ನು ಹ್ಯಾಕ್ ಮಾಡಿ ಅಶ್ಲೀಲ ದೃಶ್ಯಾವಳಿಗಳನ್ನು ಅಪ್ಲೋಡ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಸ್ಥಗಿತಗೊಳಿಸಲಾಗಿದೆ. ಹೌದು, ಇಷ್ಟು ದಿನ ಜನಸಾಮಾನ್ಯರ ಹಾಗೂ ಸಣ್ಣಪುಟ್ಟ ಖಾಸಗಿ ಸಂಘ– ಸಂಸ್ಥೆಗಳ ಸೈಬರ್ ಹ್ಯಾಕ್ ಮಾಡುತ್ತಿದ್ದ ಸೈಬರ್ ಕಳ್ಳರು ಇಂದು ನೇರವಾಗಿ ಕರ್ನಾಟಕದ ಹೈಕೋರ್ಟ್ನ ವಿಡಿಯೋ ಕಾನ್ಫರೆನ್ಸ್ ಅಪ್ಲಿಕೇಶನ್ ಅನ್ನೇ ಹ್ಯಾಕ್ ಮಾಡಿದ್ದಾರೆ.
ರಾಕಿಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಡಿಸೆಂಬರ್ 8ಕ್ಕೆ ಮುಂದಿನ ಚಿತ್ರದ ಟೈಟಲ್ ಘೋಷಣೆ!
ಇಷ್ಟಕ್ಕೇ ಸುಮ್ಮನಾಗದ ಸೈಬರ್ ಹ್ಯಾಕ್ ಖದೀಮರು, ವಿಡಿಯೋ ಕಾನ್ಪರೆನ್ಸ್ ಆ್ಯಪ್ ನಲ್ಲಿ ಅಶ್ಲೀಲ್ ದೃಶ್ಯಾವಳಿ ಅಪ್ ಲೋಡ್ ಮಾಡಿದ್ದಾರೆ. ಈ ಬಗ್ಗೆ ಹೈಕೋರ್ಟ್ ಕಲಾದ ವಿಡಿಯೋನಲ್ಲಿ ಅಶ್ಲೀಲ ವಿಡಿಯೋ ಬರುತ್ತಿದ್ದಂತೆ ಅದನ್ನು ನಿರ್ವಹಣೆ ಮಾಡುತ್ತಿದ್ದ ಸಿಬ್ಬಂದಿಯನ್ನು ಕರೆದು ಕೇಳಿದಾಗ ಸೈಬರ್ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಹೈಕೋರ್ಟ್ ವಿಡಿಯೋ ಕಲಾಪದಲ್ಲಿ ಇಂತಹ ಕೃತ್ಯ ನಡೆದ ಕೂಡಲೇಬ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿದ್ದ ವಿಚಾರಣೆಯನ್ನು ಕೂಡಲೇ ಸ್ಥಗಿತ ಮಾಡಲಾಗಿದೆ. ಸೈಬರ್ ಸೆಕ್ಯುರಿಟ್ ಸಮಸ್ಯೆ ಹಿನ್ನೆಲೆ ಸದ್ಯಕ್ಕೆ ವಿಡಿಯೋ ಕಾನ್ಫರೆನ್ಸ್ ಸ್ಥಗಿತ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ದುರಸ್ತಿಪಡಿಸುವಂತೆ ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಆದರೂ ಸರಿಹೋಗದ ಅದನ್ನು ಸ್ಥಗಿತ ಮಾಡಲಾಗಿದೆ.