ಬೆಂಗಳೂರು:- ಗೋ ಮಾತೆಯನ್ನ ಪೂಜೆ ಮಾಡುವ ಭಾರತದಲ್ಲಿ ನಿಜಕ್ಕೂ ಸಿಲಿಕಾನ್ ಸಿಟಿಯಲ್ಲಿ ಇಂದು ನಡೆದಿರುವ ಕೃತ್ಯ ಇಡೀ ಮನುಕುಲವೇ ತಲೆ ತಗ್ಗಿಸುವಂತದ್ದು.
ನಿಮಗೆ ಆಗಾಗ ವಾಂತಿ, ವಾಕರಿಕೆ ಬರುತ್ತಾ? ಹಾಗಿದ್ರೆ ಇದು Heart Attack ಮುನ್ಸೂಚನೆ!
ಹೀಗಾಗಿ ಭಾರತದಲ್ಲಿ ಉಗ್ರಗಾಮಿಗಳು ಹುಟ್ಟಿಕೊಂಡ್ರಾ ಎಂಬ ಪ್ರಶ್ನೆ ಮೂಡಿದೆ. ಉಗ್ರಗಾಮಿಗಳಿಗೂ ಈ ರೀತಿ ಕೃತ್ಯ ಮಾಡಲು ಮನಸ್ಸು ಬರುತ್ತೋ ಇಲ್ವೋ, ಆದ್ರೆ ಅಮೃತ ಕೊಡುವ ಗೋ ಮಾತೆಯ ಆಕಳನ್ನೆ ಕಳಚಿದ ಕಥೆ ನೋಡಿದ್ರೆ ಕರುಳು ಹಿಂಡುವಂತಾಗತ್ತೆ. ಹೋ ದೇವರೇ ಇವರಿಗೆ ಎಂಥ ಶಿಕ್ಷೆ ಎಂಬ ಕೂಗು ಕೇಳಿ ಬಂದಿದೆ.
ಪ್ರತಿಭಟನೆಗೆ ಹಸುಗಳನ್ನು ಕರೆದುಕೊಂಡು ಹೋಗಿದ್ದಕ್ಕೆ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ.
ಹೌದು. 6 ತಿಂಗಳ ಹಿಂದೆ ಚಾಮರಾಜಪೇಟೆಯ ಪಶು ಆಸ್ಪತ್ರೆ ಎತ್ತಂಗಡಿಗೆ ಪ್ಲ್ಯಾನ್ ನಡೆದಿತ್ತು. ಪ್ರತಿಭಟನೆಯ ವೇಳೆ ಈ ಹಸುಗಳನ್ನು ಮಾಲೀಕರು ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು.
ಕೆಲ ದಿನಗಳ ಹಿಂದೆ ಹಸುವಿನ ಗುದಾದ್ವಾರಕ್ಕೆ ಪೈಪ್ ಇಟ್ಟು ವಿಕೃತಿ ಮೆರೆದಿದ್ದರು. ಈಗ ಶನಿವಾರ ಕೆಚ್ಚಲುಗೆ ಚಾಕು ಹಾಕಿ ಇರಿದಿದ್ದಾರೆ. ಪಶು ಆಸ್ಪತ್ರೆ ಉಳಿಸಲು ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕೆ ವಿರೋಧಿಗಳು ಈ ಕೃತ್ಯ ಎಸಗಿರಬಹುದೆಂಬ ಅನುಮಾನವನ್ನು ಮಾಲೀಕರು ವ್ಯಕ್ತಪಡಿಸಿದ್ದಾರೆ.
ವಿನಾಯಕ ನಗರದಲ್ಲಿ ಶನಿವಾರ ರಾತ್ರಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ಕೊಯ್ದಿದ್ದು ಈಗ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ 20ಕ್ಕೂ ಹೆಚ್ಚು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಭಾಗದಲ್ಲಿ ಡ್ರಗ್ಸ್, ಗಾಂಜಾ ಸೇವನೆ ಹೆಚ್ಚಿದ್ದರೂ ಪೊಲೀಸರು ಇದಕ್ಕೆ ಕಡಿವಾಣ ಹಾಕುತ್ತಿಲ್ಲ ಮಹಿಳಾ ನಿವಾಸಿಗಳು ದೂರಿಸಿದ್ದಾರೆ.