ಅನೇಕ ಜನರು ತಮ್ಮ ಬೆಳಗಿನ ಉಪಹಾರಕ್ಕೂ ಮೊದಲು ರಸ್ಕ್ ಮತ್ತು ಚಹಾ ಸೇವಿಸುತ್ತಾರೆ. ಬೆಳಗ್ಗೆ ಎದ್ದು ಫ್ರೆಶ್ ಆದ ಕೂಡಲೇ ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ತುಂಬಾ ಜನರು ಬೆಳಗ್ಗೆ ಚಹಾ ಮತ್ತು ರಸ್ಕ್, ಟೋಸ್ಟ್, ಬ್ರೆಡ್ ಸೇವನೆ ಮಾಡ್ತಾರೆ. ಚಹಾ ಮತ್ತು ರಸ್ಕ್ ಇಲ್ಲದಿದ್ದರೆ ಕೆಲವರು ಬೆಳಗ್ಗೆಯೇ ಮೂಡ್ ಹಾಳು ಮಾಡಿಕೊಳ್ಳುತ್ತಾರೆ. ಆದರೆ ಹೀಗೆ ಸೇವಿಸುವ ಚಹಾ ಮತ್ತು ರಸ್ಕ್ ಆರೋಗ್ಯಕ್ಕೆ ಒಳ್ಳೆಯದೇ, ಇದು ಎಷ್ಟು ಕೆಟ್ಟ ಪರಿಣಾಮ ಬೀರುತ್ತದೆ? ಇದೆಲ್ಲವನ್ನೂ ಸರಿಯಾಗಿ ಯೋಚನೆ ಮಾಡುವುದಿಲ್ಲ.
ಕರ್ನಾಟಕ ಜನರಿಗೆ ಸೆಸ್ ಶಾಕ್ ಕೊಟ್ಟ ಸರ್ಕಾರ: ನೀರಿನ ಬಿಲ್ನಲ್ಲೇ ʻಹಸಿರು ಸೆಸ್ʼ ಸಂಗ್ರಹಕ್ಕೆ ಪ್ಲ್ಯಾನ್!
ರಸ್ಕ್ ಆರೋಗ್ಯಕ್ಕೆ ಹಾನಿಕಾರಕವಾದ ವಿವಿಧ ವಸ್ತುಗಳನ್ನು ಒಳಗೊಂಡಿರುತ್ತವೆ. ಸರಳವಾಗಿ ಹೇಳುವುದಾದರೆ ನಿಧಾನವಾಗಿ ದೇಹವನ್ನು ಪ್ರವೇಶಿಸುವ ವಿಷದಂತೆ ರಸ್ಕ್. ಹೀಗಾಗಿ ಅದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ರಸ್ಕ್ ಅನ್ನು ಹಿಟ್ಟು, ಸಕ್ಕರೆ ಮತ್ತು ಅಗ್ಗದ ಎಣ್ಣೆಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟ್ರಾನ್ಸ್ ಫ್ಯಾಟ್ ಮತ್ತು ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ. ಹೃದಯದ ಆರೋಗ್ಯ ಮತ್ತು ದೇಹದ ತೂಕಕ್ಕೆ ಅಪಾಯಕಾರಿ.
ಅಂಗಡಿಗಳಲ್ಲಿ ದೊರೆಯುವ ರಸ್ಕ್ ಗಳನ್ನು ಹೆಚ್ಚಾಗಿ ಹಳಸಿದ ಬ್ರೆಡ್ನಿಂದ ತಯಾರಿಸಲಾಗುತ್ತದೆ. ಇದು ದೇಹದ ಆರೋಗ್ಯಕ್ಕೂ ಒಳ್ಳೆಯದಲ್ಲ. ರಸ್ಕ್ ತಯಾರಿಕೆಯಲ್ಲಿ ಬಳಸುವ ಎಣ್ಣೆ ಕಳಪೆ ಗುಣಮಟ್ಟ ಹೊಂದಿರುತ್ತದೆ. ಹೀಗಾಗಿ ಅದು ಹೃದ್ರೋಗಕ್ಕೂ ಕಾರಣವಾಗುತ್ತವೆ. ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಟ್ರಾನ್ಸ್ ಕೊಬ್ಬು ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
ಸಕ್ಕರೆ ಮತ್ತು ಮೈದಾ ಹೆಚ್ಚು ಇರೋದ್ರಿಂದ ತೂಕ ಕೂಡ ಹೆಚ್ಚಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗುತ್ತದೆ. ಅದಕ್ಕಾಗಿ ಆರೋಗ್ಯ ತಜ್ಞರು ಚಹಾದೊಂದಿಗೆ ರಸ್ಕ್ ಬದಲಿಗೆ ಆರೋಗ್ಯಕರ ಆಹಾರ ತಿನ್ನಲು ಬಯಸುತ್ತಾರೆ. ಹುರಿದ ಮಖಾನ, ಕರಿದ ಕಡಲೆಕಾಳುಗಳನ್ನು ಟೀ ಜೊತೆ ತಿನ್ನಬಹುದು. ಅವು ಪೌಷ್ಟಿಕಾಂಶ ಮಾತ್ರವಲ್ಲದೇ ತೂಕ ನಿಯಂತ್ರಣಕ್ಕೂ ನೆರವಾಗುತ್ತವೆ. ಈ ತಿಂಡಿಗಳು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.