ಮನುಷ್ಯನಿಗೆ 60 ವರ್ಷ ವಯಸ್ಸಾಯಿತು ಎಂದರೆ ಅರ್ಧ ಆಯಸ್ಸು ಮುಗಿಯಿತು ಎಂದೇ ಅರ್ಥ.
ಜೀವನದ ಮೊದಲ ಅರ್ಧ ಭಾಗ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೆ ಕೇವಲ ದುಡಿಮೆ, ಮದುವೆ, ಮಕ್ಕಳು ಎಂಬ ವಿಷಯಗಳಲ್ಲಿ ಮುಳುಗಿ ಕಾಲಕಳೆದ ವ್ಯಕ್ತಿಗೆ ಉಳಿದ ಅರ್ಧ ಜೀವನ ಸ್ವಲ್ಪ ವ್ಯತ್ಯಾಸವಿರಲಿ ಎಂದು ಕಾಯಿಲೆ ಕಸಾಲೆಗಳ ಪಂಜರದಲ್ಲಿ ಸಿಕ್ಕಿ ಹಾಕಿಕೊಂಡಿರುತ್ತದೆ.
ಅದರಲ್ಲೂ 60 ವರ್ಷವಾದರಂತೂ ಆರೋಗ್ಯವನ್ನ ಜೋಪಾನ ಮಾಡಿಕೊಳ್ಳುವುದು ತುಂಬ ಮುಖ್ಯವಾಗುತ್ತದೆ. ಸ್ವಯಂ ಕಾಳಜಿ ಮಾಡಿಕೊಳ್ಳುವುದು ಅತ್ಯಗತ್ಯ.
Parenting Tips: ಈ ಮಕ್ಕಳ ತುಂಟಾಟಗಳು ಕೆಲವೊಮ್ಮೆ ಸಿಟ್ಟು ತರುತ್ತೆ: ತಂದೆ ತಾಯಿ ಪಾಲಿಸಬೇಕಾದ ಕ್ರಮ ಏನು ಗೊತ್ತಾ?
ನೀವು ನಿಮ್ಮನ್ನ ಹೀಗೆ ಆರೈಕೆ ಮಾಡಿಕೊಂಡರೆ 60ನೇ ವಯಸ್ಸಿನಲ್ಲೂ ಆರೋಗ್ಯವಾಗಿ ಇರಲು ಸಾಧ್ಯ. ಅಷ್ಟೇ ಅಲ್ಲ, ಇನ್ನೂ ಹೆಚ್ಚು ವರ್ಷ ಚೆನ್ನಾಗಿ ಬಾಳಿ-ಬದುಕಬಹುದು.
60 ವರ್ಷ ಆದವರು ಜಾಸ್ತಿ ನೀರು ಕುಡಿಯಬೇಕು. ದೇಹವನ್ನ ಸದಾ ಹೈಡ್ರೇಟ್ ಆಗಿಟ್ಟುಕೊಳ್ಳಬೇಕು. ಈ ವಯಸ್ಸಿನಲ್ಲಿ ಸಾಕಷ್ಟು ನೀರು ಕುಡಿಯದೆ ಇದ್ದರೆ, ತಲೆನೋವು, ದಣಿವಿನಂಥ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ದಿನವಿಡೀ ಸುಸ್ತಾಗಿಯೇ ಇರಬೇಕಾಗುತ್ತದೆ. ನೀರು ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆಯಾಗಿ, ಜೀರ್ಣಕ್ರಿಯೆಯೂ ಸರಾಗವಾಗಿ ಆಗುತ್ತದೆ. ದೇಹದಲ್ಲಿರುವ ವಿಷವನ್ನ ಹೊರಹಾಕಿ, ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ. ಈ ವಯಸ್ಸಿನಲ್ಲಿ ಸಾಧ್ಯವಾದಷ್ಟು ಟೀ-ಕಾಫಿ ಕಡಿಮೆ ಮಾಡುವುದು ಒಳ್ಳೆಯದು.
ಪ್ರತಿದಿನ ವ್ಯಾಯಾಮ ಮಾಡಿ..
60ವರ್ಷ ದಾಟಿದ ಮೇಲೆ ದೇಹಕ್ಕೆ ಅಗತ್ಯ ವ್ಯಾಯಾಮ ಬೇಕು. ಅಯ್ಯೋ ವಯಸ್ಸಾಯ್ತು..ಒಂದು ಕಡೆ ಕುಳಿತು-ಮಲಗಿರೋಣ ಎಂದುಕೊಳ್ಳಬಾರದು. ಬದಲಿಗೆ ದಿನಕ್ಕೆ 30 ನಿಮಿಷವಾದರೂ ವ್ಯಾಯಾಮ ಮಾಡಬೇಕು. ನಿಮಗೆ ಯಾವುದು ಕಂಫರ್ಟ್ ಆಗುತ್ತದೆಯೋ, ಅದೇ ವ್ಯಾಯಾಮವನ್ನ ರೂಢಿಸಿಕೊಳ್ಳಿ. ಜಾಗಿಂಗ್, ಸ್ವಿಮ್ಮಿಂಗ್, ಸೈಕ್ಲಿಂಗ್, ಡ್ಯಾನ್ಸಿಂಗ್ ಅಥವಾ ಇನ್ಯಾವುದೇ ದೈಹಿಕ ಪರಿಶ್ರಮ ರೂಢಿಸಿಕೊಳ್ಳಿ.
ಸರಿಯಾಗಿ ನಿದ್ದೆ ಮಾಡಿ..
ವಯಸ್ಸಾಗ್ತಿದ್ದಂತೆ ನಿದ್ದೆ ಕಡಿಮೆಯಾಗುತ್ತದೆ. ಆದರೆ ಹೀಗಾಗಲು ಬಿಡಬಾರದು. ರಾತ್ರಿ ಸರಿಯಾಗಿ ನಿದ್ದೆ ಮಾಡಬೇಕು. ಪ್ರತಿದಿನವೂ ಒಂದೇ ಸಮಯಕ್ಕೆ ನಿದ್ದೆ ಮಾಡುವುದನ್ನ ಅಭ್ಯಾಸ ಮಾಡಿಕೊಳ್ಳಬೇಕು. 7 ತಾಸು ನಿದ್ದೆ ಮಾಡಿ. ಸರಿಯಾಗಿ ನಿದ್ದೆ ಮಾಡಿದಾಗ ಹಾರ್ಮೋನ್ಗಳ ಸಮತೋಲನ ಸರಿಯಾಗಿ ಆಗುತ್ತದೆ. ಆರೋಗ್ಯವೂ ಸರಿಯಾಗಿ ಇರುತ್ತದೆ..
ಅತಿಯಾಗಿ ತಿನ್ನಬೇಡಿ..
ವಯಸ್ಸಾಗುತ್ತಿದ್ದಂತೆ ಜೀರ್ಣಶಕ್ತಿ ಕಡಿಮೆ ಆಗುತ್ತದೆ. ಹೀಗಾಗಿ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಯಾವುದನ್ನೂ ಅತಿಯಾಗಿ ತಿನ್ನಬಾರದು. ಚಯಾಪಚಯ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಆಗುವುದರಿಂದ ಅಗತ್ಯ ಇರುವಷ್ಟೇ ಆಹಾರ ತೆಗೆದುಕೊಳ್ಳಿ. ಮಿತಮೀರಿ ತಿಂದರೆ, ಅತಿಯಾದ ಗಟ್ಟಿ ಆಹಾರಗಳನ್ನ ತಿನ್ನುವುದರಿಂದ ಹೊಟ್ಟೆಯುಬ್ಬರ ಉಂಟಾಗಬಹುದು..
ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ
60 ವರ್ಷ ಆದ ನಂತರ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಶುಗರ್, ಬಿಪಿ ಬಗ್ಗೆ ಎಲ್ಲ ಗಮನ ಇರಬೇಕು. ನಿಯಮಿತವಾಗಿ ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಕೆಲವು ಗಂಭೀರ ಸ್ವರೂಪದ ಕಾಯಿಲೆಗಳ ಬಗ್ಗೆ ಮುನ್ಸೂಚನೆ ಸಿಗುತ್ತದೆ.