ನವದೆಹಲಿ: ರೋಹಿತ್ ಶರ್ಮಾ (Rohit Sharma) ಉತ್ತಮ ಫಾರ್ಮ್ನಲ್ಲಿಯೇ ಉಳಿದಿದ್ದರೆ, 2024ರ ಟಿ20 ವಿಶ್ವಕಪ್ (T20 World Cup) ಪಂದ್ಯದಲ್ಲಿ ಭಾರತ ತಂಡವನ್ನು (Team India) ಮುನ್ನಡೆಸಬೇಕು ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ರೋಹಿತ್ ಉತ್ತಮ ಫಾರ್ಮ್ನಲ್ಲಿ ಉಳಿದರೆ ಟಿ20 ವಿಶ್ವಕಪ್ನ್ನು ಮುನ್ನಡೆಸಲಿ. ಅಲ್ಲದೇ ಉತ್ತಮ ಫಾರ್ಮ್’ನಲ್ಲಿ ಇಲ್ಲದವರನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡಬಾರದು. ನಾಯಕತ್ವ ಎನ್ನುವುದು ದೊಡ್ಡ ಜವಾಬ್ದಾರಿ. ಆಟಗಾರನ ಉತ್ತಮ ಪ್ರದರ್ಶನದ ಮೇಲೆ ನಾಯಕನಾಗುವ ಅರ್ಹತೆ ಬೆಳೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಾಡಿಗೆ ಬೈಕ್’ನಲ್ಲಿ 330km ಪ್ರಯಾಣಿಸಿ ವಿಧಾನಸಭೆಗೆ ತೆರಳಿದ ಜನಪ್ರತಿನಿಧಿ!
ಆಟಗಾರನನ್ನು ತಂಡದಿಂದ ಕೈಬಿಡಲು ವಯಸ್ಸು ಮಾನದಂಡವಾಗಬಾರದು. ಕೇವಲ ಫಾರ್ಮ್ ಮಾತ್ರ ಮಾನದಂಡವಾಗಿರಬೇಕು. ಆಟಗಾರನನ್ನು ಏಕೆ ಕೈಬಿಡಬೇಕು ಅಥವಾ ಏಕೆ ಆಯ್ಕೆ ಮಾಡಬೇಕು ಎಂಬುದಕ್ಕೆ ವಯಸ್ಸು ಅರ್ಹತೆಯೇ ಅಲ್ಲ. ಆಟಗಾರನ ನಿವೃತ್ತಿ ಆತನ ವೈಯಕ್ತಿಕ ನಿರ್ಧಾರವಾಗಿದೆ. ಇದರಲ್ಲಿ ಯಾರ ಒತ್ತಾಯವು ಇರಬಾರದು ಎಂದು ಅವರು ಹೇಳಿದ್ದಾರೆ.