ನವದೆಹಲಿ: ಈ ದುರಂತ ಸರ್ಕಾರವು ದೆಹಲಿಯ ಅಭಿವೃದ್ಧಿಯನ್ನು ನಿಂತಲ್ಲಿಯೇ ನಿಲ್ಲಿಸಿದೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಆಪ್ ರಾಷ್ಟ್ರ ರಾಜಧಾನಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ನರೇಂದ್ರ ಮೋದಿ ಟೀಕಿಸಿದ್ದಾರೆ. ಎಎಪಿ ದೆಹಲಿಗೆ ಆಪತ್ತಾಗಿದೆ.
ಮೊದಲು ಕಳ್ಳತನ ಮತ್ತು ದುರಹಂಕಾರವು ದೆಹಲಿಯನ್ನು ದುರಂತದಂತಹ ಪರಿಸ್ಥಿತಿಗೆ ತಳ್ಳಿತು. ಕಳೆದ 10 ವರ್ಷಗಳಿಂದ ದೆಹಲಿಯು ದೊಡ್ಡ ದುರಂತದಿಂದ ಸುತ್ತುವರೆದಿದೆ. ಈ ದುರಂತ ಸರ್ಕಾರವು ದೆಹಲಿಯ ಅಭಿವೃದ್ಧಿಯನ್ನು ನಿಂತಲ್ಲಿಯೇ ನಿಲ್ಲಿಸಿದೆ. ನಾವು ದುರಂತವನ್ನು ಸಹಿಸುವುದಿಲ್ಲ, ನಾವು ಅದನ್ನು ಬದಲಾಯಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಚಳಿಗಾಲದಲ್ಲೇ ಏಕೆ ಜಾಸ್ತಿ ಸೆಕ್ಸ್ ಮಾಡಬೇಕು ಅನಿಸುತ್ತೆ ಗೊತ್ತಾ..? ಇದಕ್ಕೆ ಕಾರಣ ಇಲ್ಲಿದೆ ನೋಡಿ
ಇಂದು ಭಾರತವು ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯ ಸಂಕೇತವಾಗಿದೆ. ಭಾರತದ ಈ ಪಾತ್ರವು 2025ರಲ್ಲಿ ಇನ್ನಷ್ಟು ಬಲಗೊಳ್ಳಲಿದೆ. ಈ ವರ್ಷ ವಿಶ್ವದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ವರ್ಷವಾಗಿದೆ. ಭಾರತವು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ. ನಾನು ದೆಹಲಿಯ ಕೆಲವು ಮಕ್ಕಳನ್ನು ಭೇಟಿಯಾದಾಗ ಅವರ ಕನಸುಗಳು ಸ್ವಾಭಿಮಾನ್ ಅಪಾರ್ಟ್ಮೆಂಟ್ಗಿಂತ ಎತ್ತರದಲ್ಲಿದೆ ಎಂದು ನಾನು ನೋಡಿದೆ ಎಂದು ಮೋದಿ ಹೇಳಿದ್ದಾರೆ.