ಈ ಬಾರಿ ಬಿಗ್ ಬಾಸ್ (Bigg Boss) ಫಿನಾಲೆ (Finale) ವೇದಿಕೆಯ ಮೇಲೆ ಸೂಪರ್ ಸ್ಟಾರ್ ಇರಲಿದ್ದಾರೆ ಎನ್ನುವ ಸುದ್ದಿ ಟಾಲಿವುಟ್ ಅಂಗಳಲ್ಲಿ ಹರಿದಾಡುತ್ತಿದೆ. ತೆಲುಗಿನ ಬಿಗ್ ಬಾಸ್ ಫಿನಾಲೆಗೆ ಮುಖ್ಯ ಅತಿಥಿಯಾಗಿ ಮಹೇಶ್ ಬಾಬು ಇರಲಿದ್ದಾರಂತೆ. ಈಗಾಗಲೇ ಮಹೇಶ್ ಬಾಬು ಬರಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹೇಶ್ ಬಾಬು (Mahesh Babu) ಸದ್ಯ ಗುಂಟೂರು ಖಾರ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಯಲಿದೆಯಂತೆ. ಈ ಸಿನಿಮಾದ ಪ್ರಚಾರಕ್ಕಾಗಿ ಫಿನಾಲಿ ವೇದಿಕೆ ಏರಲಿದ್ದಾರೆ ಎಂದು ಅಲ್ಲಿ ಮಾಧ್ಯಮಗಳು ಸುದ್ದಿ ಮಾಡಿವೆ.
ತೆಲುಗಿನ ಬಿಗ್ ಬಾಸ್ ಕೂಡ ಕೊನೆಯ ಹಂತಕ್ಕೆ ಬಂದು ತಲುಪಿದೆ. ಈ ಬಾರಿ ಕನ್ನಡತಿ ಶೋಭಾ ಶೆಟ್ಟಿ ಅವರು ಫಿನಾಲೆಯಲ್ಲಿ ಇರಲಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಮೊನ್ನೆಯಷ್ಟೇ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ. ಹಾಗಾಗಿ ಸಹಜವಾಗಿಯೇ ಕನ್ನಡಿಗರಿಗೆ ನಿರಾಸೆಯಾಗಿದೆ.