ಭಾರತದಲ್ಲಿ ಕಾಶಿ ತೀರ್ಥ ಅನ್ನೋದು ಪುಣ್ಯಕ್ಷೇತ್ರ ಮನುಷ್ಯ ತನ್ನ ಬದುಕಿನ ಕಾಲ ಘಟ್ಟದಲ್ಲಿ ಒಮ್ಮೆಯಾದ್ರು ಈ ಪುಣ್ಯ ಕ್ಷೇತ್ರದ ದರ್ಶನ ಮಾಡಬೇಕು ಅಂತಾರೆ ಆ ಎಲ್ಲ ದೇವತೆಗಳ ಸಂಗಮ ಕ್ಷೇತ್ರವೇ ಈ ದಕ್ಷಿಣ ಭಾರತದ ಸುಕ್ಷೇತ್ರ ಮದಭಾವಿಯ ಶ್ರೀ ಶನೇಶ್ವರ ದೇವಸ್ಥಾನ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಬರುವ ಸುಕ್ಷೇತ್ರ ಮದಭಾವಿಯ ಶನಿಮಹಾತ್ಮನ ದೆವಸ್ಥಾನವು ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿದೆ ದಕ್ಷಿಣ ಭಾರತದಲ್ಲಿ ಪಿರಮಿಡ್ ಅಕೃತಿಯ ಶೀಲಾ ವಿನ್ಯಾಸ ಹೊಂದಿರುವ ಏಕೈಕ ಶನಿ ದೆವಸ್ಥಾನವೆಂಬ ಹೆಗ್ಗಳಿಕೆ ಈ ದೇವಸ್ಥಾನಕ್ಕಿದೆ.
ಈ ದೇವಸ್ಥಾನವು 2008 ರಲ್ಲಿ ನಿರ್ಮಾಣವಾಗಿದ್ದು ಪಿರಮಿಡ್ ಅಕೃತಿ ಹೊಂದಿದೆ ದೇವಸ್ಥಾನ ದ್ವಾರ ಬಾಗಿಲು ಪ್ರವೇಶದಲ್ಲಿ ಶನಿದೇವನ ವಾಹನ ಕಾಗೆಗೆ ಎಣ್ಣೆ ಹಾಕಿ ಎಡಭಾಗದಿಂದ ಪ್ರವೇಶ ಮಾಡಬೇಕು ನಂತರ ಕಲ್ಯಾಣ ಗೃಹದಲ್ಲಿ ಕೈ ಕಾಲು ತೊಳೆದುಕೊಂಡು ದೋಷಮುಕ್ತಾರಾಗಿ ಮಹಾಕಾಲೆಶ್ವರ ಹಾಗೂ 12 ಜೊತಿರ್ಲಿಂಗಗಳ ದರ್ಶನ ಭಾಗ್ಯ ನಿಮಗೆ ಒದಗುತ್ತದೆ .
ಈ ದಿವಸ್ಥಾನದ ನಿರ್ಮಾಣ ಬಹಳ ವಿಧಿವಿಧಾನಗಳಿಂದ ಕೂಡಿದ್ದು ದೇವಸ್ಥಾನ ನಿರ್ಮಾಣ ಮಾಡುವಾಗ ಕಾಶಿ, ಕೈಲಾಸ ಪರ್ವತ ಅದರ ಜೊತೆ ಏಳು ಸಮುದ್ರ ಪಂಚ ನದಿಯ ಪವಿತ್ರ ತೀರ್ಥ ತಂದು ಶನೇಶ್ವರ ಸ್ವಾಮೀಯ ಪ್ರತಿಷ್ಠಾಪನೆ ಮಾಡಲಾಗಿದೆಯಂತೆ.
4 ದೇವಸ್ಥಾನದ ಆವರಣದಲ್ಲಿ ವಿಶೇಷ ವಿನ್ಯಾಷದಿಂದ ನಿರ್ಮಿಸಲಾದ ನವಗ್ರಹಗಳ ದರ್ಶನ ಪಡೆದು ಗ್ರಹ ದೋಷ ಪರಿಹಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಪ್ರತಿ ಬಾದಾಮಿ ಅಮಾವಾಸ್ಯಯಂದು ಶನಿ ಜಯಂತಿ ಪ್ರಯುಕ್ತ ಜಾತ್ರೆ ನಡೆಯುತ್ತದೆ ಜಾತ್ರೆಯಲ್ಲಿ ವಿಶೇಷ ಯಜ್ಞ, ಹೋಮ ಹವನ, ಶನಿ ಶಾಂತಿ ನವಗ್ರಹ ಶಾಂತಿ ಕಾರ್ಯಕ್ರಮ ಜರುಗುತ್ತವೆ ಪ್ರತಿ ಶನಿವಾರ ಯಜ್ಞ ಹೋಮ ಹವನ, ಮಾಡಿ ಭಕ್ತರು ತಮ್ಮ ಇಷ್ಟಾರ್ಥ ಪೂರೈಸಿಕೊಳ್ಳುವ ವಾಡಿಕೆ ಇದೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೆನಿಸಿಕೊಂಡ ಶನಿ ದೇವಸ್ಥಾನಕ್ಕೆ ಕರ್ನಾಟಕದ ಭಕ್ತರಷ್ಟೆ ಅಲ್ಲದೆ ಪಕ್ಕದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾನ, ಮಧ್ಯಪ್ರದೇಶ ಹಾಗೂ ವಿದೇಶ ದಿಂದಲೂ ಭಕ್ತರು ಬಂದು ದರ್ಶನ ಪಡೆದು ಭಕ್ತಿ ಪರಾಕಷ್ಟೆ ತೋರುತ್ತಾರೆ.