ಕಾನ್ಪುರದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬಾಂಗ್ಲಾದೇಶ್ 233 ರನ್ಗಳಿಸಿದರೆ, ಟೀಮ್ ಇಂಡಿಯಾ 285 ರನ್ ಕಲೆಹಾಕಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಬಾಂಗ್ಲಾದೇಶ್ ತಂಡವನ್ನು 146 ರನ್ಗಳಿಗೆ ಭಾರತೀಯ ಬೌಲರ್ಗಳು ಆಲೌಟ್ ಮಾಡಿದ್ದರು. ಈ ಮೂಲಕ 95 ರನ್ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಏಳು ವಿಕೆಟ್ಗಳ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಈ ಪಂದ್ಯದ ನಂತರ ಮಾತನಾಡಿದ ರೋಹಿತ್ ಶರ್ಮಾ, ಬೌಲರ್ಗಳ ಅಸಾಧಾರಣ ಪ್ರದರ್ಶನ ಮತ್ತು ಬ್ಯಾಟ್ಸ್ಮನ್ಗಳ ರಿಸ್ಕ್ನಿಂದ ಗೆಲುವು ಸಾಧಿಸಲಾಗಿದೆ ಎಂದು ಹೇಳಿದರು. ಫಲಿತಾಂಶಕ್ಕಾಗಿ 100 ರನ್ಗಳಿಗೆ ಔಟಾದರೂ ಪರವಾಗಿಲ್ಲ ಎಂದು ಭಾವಿಸಿ ಆಕ್ರಮಣಕಾರಿ ಆಟವಾಡಿದ್ದೇವೆ ಎಂದು ರೋಹಿತ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಹೆಡ್ ಕೋಚ್ ಗೌತಮ್ ಗಂಭೀರ್ ಜೊತೆ ಕೆಲಸ ಮಾಡುವ ಬಗ್ಗೆ ಆಸಕ್ತಿದಾಯಕ ಹೇಳಿಕೆಯನ್ನು ನೀಡಿದ್ದಾರೆ.
Tamarind Seed Benefits: ಹುಣಸೆ ಬೀಜದ ಆರೋಗ್ಯಕಾರಿ ಪ್ರಯೋಜನಗಳು ಒಂದೇ ಎರಡೇ..? ಇಲ್ಲಿದೆ ನೋಡಿ
ಜೀವನದಲ್ಲಿ ಮುಂದೆ ಸಾಗಬೇಕು. ಕೆಲವೊಮ್ಮೆ ನೀವು ವಿಭಿನ್ನ ಜನರೊಂದಿಗೆ ಕೆಲಸ ಮಾಡಬೇಕಾಗುತ್ತದೆ. ದ್ರಾವಿಡ್ ಭಾಯ್ ವಿದಾಯ ಹೇಳಿದ್ದಾರೆ. ಆದರೂ ನಾವು ಅವರೊಂದಿಗೆ ಅದ್ಭುತ ಸಮಯವನ್ನು ಕಳೆದಿದ್ದೇವೆ. ಅವರು ದೂರವಿದ್ದರೂ ನಾವು ತಂಡವಾಗಿ ಮುನ್ನಡೆಯುತ್ತಿದ್ದೇವೆ. ನಾನು ಗೌತಮ್ ಗಂಭೀರ್ ಜೊತೆ ಆಡಿದ್ದೇನೆ. ಅವರು ಯಾವ ರೀತಿಯ ಮನಸ್ಥಿತಿಯೊಂದಿಗೆ ಬರುತ್ತಾರೆಂಬುದು ನಮಗೆ ತಿಳಿದಿದೆ. ಈ ಸರಣಿ ಗೆಲುವು ಅವರ ಕೋಚಿಂಗ್ ವೃತ್ತಿಜೀವನಕ್ಕೆ ಉತ್ತಮ ಆರಂಭವಾಗಿದೆ,” ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಎರಡೂವರೆ ದಿನಗಳ ಆಟದ ನಂತರ, ನಾವು ಫಲಿತಾಂಶವನ್ನು ಪಡೆಯುವ ಬಗ್ಗೆ ಚೆನ್ನಾಗಿ ಯೋಚಿಸಿದ್ದೇವೆ. ನಾಲ್ಕನೇ ದಿನದ ಆಟದಲ್ಲಿ ಬಾಂಗ್ಲಾದೇಶವನ್ನು ಆದಷ್ಟು ಬೇಗ ಔಟ್ ಮಾಡಲು ಬಯಸಿದ್ದೆವು. ಅವರ ಯಾವುದೇ ಓಟ ನಮಗೆ ಕಾಣಲಿಲ್ಲ. ನಾವು ಎಷ್ಟು ಓವರ್ ಬೌಲ್ ಮಾಡುತ್ತಿದ್ದೇವೆಂಬುದಕ್ಕೆ ಆದ್ಯತೆ ನೀಡಿದ್ದೇವೆ. ಅವರನ್ನು ಬೇಗನೇ ಔಟ್ ಮಾಡಿ ಬ್ಯಾಟಿಂಗ್ನಲ್ಲಿ ಮಿಂಚಬೇಕೆಂದು ಬಯಸಿದ್ದೆವು,” ಎಂದು ಟೀಮ್ ಇಂಡಿಯಾ ಕ್ಯಾಪ್ಟನ್ ಹೇಳಿದ್ದಾರೆ.