ಹಸಿಕಡಲೆ ಇಷ್ಟ ಇರದ ಜನರೇ ಇರಲಾರರು ಅನಿಸುತ್ತದೆ. ಹಸಿಗಡಲೆ ತಿನ್ನಲು ಬಹಳ ರುಚಿಕರ ವಾಗಿರುತ್ತದೆ. ಅಡುಗೆಯಲ್ಲಿ ವಿವಿಧ ರೀತಿಯಲ್ಲಿ ಹಸಿಗಡಲೆ ಬಳಸಲಾಗುತ್ತದೆ. ಇದು ಸಾಕಷ್ಟು ಕ್ಯಾಲೋರಿ ಕೊಬ್ಬಿನಿಂದ ಸಮೃದ್ಧವಾಗಿದೆ. ಈ ಕೆಲವು ಸಮಸ್ಯೆ ಇರುವವರು ನೆಲಕಡಲೆಯನ್ನು ತಿನ್ನೋದ್ರಿಂದ ದೂರ ಉಳಿಯುವುದು ಒಳ್ಳೆಯದು ಎನ್ನಲಾಗುತ್ತದೆ.
ಆರೋಗ್ಯಕರವಾಗಿ ಜೀವನ ನಡೆಸಲು ಕೆಲವೊಂದು ಆಹಾರಗಳ ಆಗತ್ಯತೆ ಇರುತ್ತದೆ. ಗರ್ಭಿಣಿ ಮಹಿಳೆಯರ ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ ಕಡಲೆ ಬೀಜಗಳು ತುಂಬಾ ಪ್ರಯೋಜನಕಾರಿ.
ಆದರೆ ಇವುಗಳನ್ನು ಮಿತ ಪ್ರಮಾಣದಲ್ಲಿ ಮಾತ್ರ ಸೇವನೆ ಮಾಡಬೇಕು ಎಂದು ಹೇಳುತ್ತಾರೆ. ಕಡಲೆ ಬೀಜಗಳನ್ನು ಸೇವನೆ ಮಾಡುವ ಮುಂಚೆ ಅದಕ್ಕೆ ಉಪ್ಪು ಬೆರೆಸಬೇಡಿ. ಏಕೆಂದರೆ ಉಪ್ಪಿನ ಅಂಶ ರಕ್ತದ ಒತ್ತಡ ಹೆಚ್ಚಾಗುವಂತೆ ಮಾಡುತ್ತದೆ.
ಹಸಿಗಡಲೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ವಿಟಮಿನ್ ಸಿ ನಲ್ಲಿ ಸಮೃದ್ಧವಾಗಿದೆ. ಅಲ್ಲದೆ, ವೈರಲ್ ಸೋಂಕಿನ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
ಹಸಿ ಕಡಲೆಯಲ್ಲಿ ಕರಗುವ ನಾರು ಇದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಹತೋಟಿಗೆ ತರಲು ಸಹಾಯ ಮಾಡುತ್ತದೆ. ಅಲ್ಲದೆ, ರಕ್ತದಲ್ಲಿನ ಗ್ಲೂಕೋಸ್ ಮತ್ತು ಲಿಪಿಡ್ ಪ್ರೊಫೈಲ್ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದು ಟೈಪ್ 2 ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಈ ಹಸಿರು ಕಾಳುಗಳಲ್ಲಿ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದನ್ನು ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.
ಹಸಿರು ಬೇಳೆಯಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ ಮತ್ತು ಇದರ ಸೇವನೆಯಿಂದ ಕಣ್ಣಿನ ಹೊಳಪು ಸುಧಾರಿಸುತ್ತದೆ. ಹಸಿರು ಬೇಳೆಯನ್ನು ತಿನ್ನುವುದರಿಂದ ಅನೇಕ ಕಣ್ಣಿನ ಸಮಸ್ಯೆಗಳನ್ನು ತಡೆಯಬಹುದು.