ಬೆಂಗಳೂರು:– B.Ed ವ್ಯಾಸಂಗಕ್ಕಾಗಿ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ ಹೊರ ಬಿದ್ದಿದೆ. 2023-24ನೇ ಸಾಲಿನ ಬಿ.ಇಡಿ ಕೋರ್ಸಿಗೆ ದಾಖಲಾತಿಗಾಗಿ ಕಾಲೇಜುಗಳ Option Entry ಬದಲಾವಣೆಗೆ ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳು ಆನ್ಲೈನ್ ಅರ್ಜಿಯಲ್ಲಿ ಆಯ್ಕೆ ಮಾಡಿಕೊಂಡಿರುವ ಕಾಲೇಜುಗಳ ಆಧ್ಯತೆಯ ಬದಲಾವಣೆಗೆ ದಿನಾಂಕ:22/12/2023 ರಿಂದ 24/12/2023ರ ಸಂಜೆ 6.00 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಆನ್ಲೈನ್ ಅರ್ಜಿಯಲ್ಲಿ ಲಾಗಿನ್ ಆಗುವುದರ ಮೂಲಕ ಕಾಲೇಜುಗಳ ಆದ್ಯತೆಯನ್ನು ಬದಲಾಯಿಸಿಕೊಳ್ಳಬಹುದಾಗಿದೆ