ಶಿವಮೊಗ್ಗ : ಬಜೆಟ್ ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ, ಇದು ಅಂಬೇಡ್ಕರ್ ಅವರ ಆಶಯಕ್ಕೆ ಪೂರಕವಾಗಿದೆ ಎಂದು ಶಾಸಕ ಚನ್ನಬಸಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಬಜೆಟ್ ನಲ್ಲಿ ಮಹಿಳೆಯರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಅನುಕೂಲವಾಗುವಂತೆ ಕ್ರಮವನ್ನು ಘೋಷಣೆ ಮಾಡಿದ್ದಾರೆ. ತಾಯಿ ಹೃದಯದ ಬಜೆಟನ್ನು ನಿರ್ಮಲ ಸೀತಾರಾಮನ್ ಅವರು ನೀಡಿದ್ದಾರೆ. ಕಾಂಗ್ರೆಸಿಗರು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ನಡೆಸಿದ್ದಾರೆ. ಯಾವ ಯಾವ ರಾಜ್ಯಗಳಿಗೆ ಏನೇನು ಕೊಡಬೇಕು ಎಂಬುದರ ಬಗ್ಗೆ ಕಾಂಗ್ರೆಸ್ಸಿಗರು ಕೇಂದ್ರಕ್ಕೆ ಸಲಹೆ ನೀಡಲಿ, ಬಿಹಾರಕ್ಕೆ ಈ ಬಾರಿ ಜಾಸ್ತಿ ನೀಡಿರಬಹುದು. ಮುಂದಿನ ಬಾರಿ ಕರ್ನಾಟಕಕ್ಕೂ ಸಹ ಕೊಡಬಹುದು. ರೈಲ್ವೆ ಸೇರಿದಂತೆ ಕೇಂದ್ರದ ಯೋಜನೆಗಳು ಶಿವಮೊಗ್ಗಕ್ಕೂ ಬಂದಿದೆ. ಒಟ್ಟಿನಲ್ಲಿ ಗ್ರಾಮೀಣ ಭಾರತದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ ಎಂದರು.