ಬೆಂಗಳೂರು:- ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಮಹಿಳಾ ಪ್ರಯಾಣಿಕರ ಸಂಖ್ಯೆ ಶತ ಕೋಟಿ ದಾಟಿದೆ. ಯೋಜನೆಯಲ್ಲಿ ಅನುಕೂಲ ಪಡೆದಿರುವ ಮಹಿಳಾ ಪ್ರಯಾಣಿಕರ ಸಂಖ್ಯೆ ಬರೋಬ್ಬರಿ 100 ಕೋಟಿ ದಾಟಿದೆ.
ಶಕ್ತಿ ಯೋಜನೆ ಜಾರಿಯಾಗಿ ಐದೇ ತಿಂಗಳಿಗೆ 2397 ಕೋಟಿ ರೂ. ವ್ಯಯವಾಗಿದ್ದು, ಕೆಲವೇ ದಿನಗಳಲ್ಲಿ 2500 ಕೋಟಿ ರೂ. ತಲುಪಲಿದೆ.
ಪ್ರತಿನಿತ್ಯ ಲಕ್ಷ ಲಕ್ಷ ಮಹಿಳಾ ಮಣಿಗಳ ಪ್ರಯಾಣದಿಂದ 2397 ಕೋಟಿ ವ್ಯಯವಾಗಿದೆ. ಕಳೆದ 165 ದಿನಗಳಲ್ಲಿ 100,47,56,184 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ.
ಮಹಿಳಾ ಪ್ರಯಾಣಿಕರ ವಿವರ
ಕೆಎಸ್ಆರ್ಟಿಸಿ – 30,12,17,350
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 900,29,21,508
ಬಿಎಂಟಿಸಿ – 32,69,60,082
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 420,82,19,200
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ – 23,37,23,007
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 600,69,91,513
ಕಲ್ಯಾಣ ಕರ್ನಾಟಕ – 14,28,55,745
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 475,98,79,341
ಶಕ್ತಿ ಯೋಜನೆ ಜಾರಿಯಾದ ಬಳಿಕ ಅಂದರೆ ಕಳೆದ ಐದೂವರೆ ತಿಂಗಳಲ್ಲಿ 178 ಕೋಟಿ ಮಂದಿ ಸಾರಿಗೆ ಬಸ್ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಈ ಪೈಕಿ 78 ಕೋಟಿ ಪುರುಷ ಪ್ರಯಾಣಿಕರಿದ್ದರೆ, 100 ಕೋಟಿ ಮಹಿಳಾ ಪ್ರಯಾಣಿಕರಿದ್ದಾರೆ ಎಂದು ಹೇಳಲಾಗಿದೆ.