ಪ್ಯಾರಿಸ್ ಒಲಿಂಪಿಕ್ಸ್ನ ಫೈನಲ್ ಪಂದ್ಯದಿಂದ ಅನರ್ಹಗೊಂಡು ಭಾರತದ ಚಿನ್ನದ ಕನಸು ಛಿದ್ರಗೊಂಡ ಬೆನ್ನಲ್ಲೇ ವಿನೇಶಾ ಫೋಗಟ್ ಇಡೀ ದೇಶವೇ ಅಚ್ಚರಿಯಾಗುವಂತಹ ನಿರ್ಧಾರ ಕೈಗೊಂಡಿದ್ದಾರೆ. ಅಂದರೆ ಅವರು ಪ್ಯಾರಿಸ್ ಒಲಿಂಪಿಕ್ಸ್ಗೂ ಮುನ್ನವೇ ನಿರ್ಧಾರ ಕೈಗೊಂಡಂತೆ ಕುಸ್ತಿ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದಾರೆ.
ವಾಟ್ಸಪ್ ಡಿಪಿಗೆ ಫೋಟೋ ಹಾಕಿದ್ದೆ ತಡ ಖತರ್ನಾಕ್ ಕಳ್ಳಿ ಅರೆಸ್ಟ್: ರೋಚಕ ಕಹಾನಿ!
ಇವರೇ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲಿದ್ದಾರೆ ಎಂದು ಜನರು ಊಹಿಸಿದ್ದ, ವಿಶ್ವದ ನಂಬರ್ ವನ್ ಕುಸ್ತಿಪಟು, ಸೋಲು ಏನೆಂದೇ ತಿಳಿಯದ ಜಪಾನಿನ ಅದ್ವಿತೀಯ ಆಟಗಾರ್ತಿ, ದಾಖಲೆಗಳ ಸರಮಾಲೆಯನ್ನೇ ತನ್ನ ಹೆಸರಿಗೆ ಬರೆದುಕೊಂಡಿರುವ ಯೂಯಿ ಸುಸಾಕಿಗೆ ಭಾರತದ ವಿನೇಶ್ ಫೋಗಟ್ ಮಣ್ಣು ಮುಕ್ಕಿಸಿದಾಗ ಇಡೀ ವಿಶ್ವವೇ ಬೆರಗಾಗಿತ್ತು. ಅದರ ಜೊತೆಗೆ ಈ ಬಾರಿ ಭಾರತಕ್ಕೆ ಚಿನ್ನ ಫಿಕ್ಸ್ ಎಂದೇ ಕುಸ್ತಿಪ್ರಿಯರು ಊಹಿಸಿದ್ದರು. ಆದರೆ ದುರಾದೃಷ್ಟವಶಾತ್ ವಿನೇಶ್ ಅನರ್ಹಗೊಂಡಿದ್ದಾರೆ.
ವಿನೇಶ್ಗಾದ ಆಘಾತದಿಂದ ವಿಶೇಷವಾಗಿ ಕುಸ್ತಿ ಕ್ರೀಡೆಯಲ್ಲಿ ತಮ್ಮ ಭವಿಷ್ಯವನ್ನು ಹುಡುಕುತ್ತಿರುವ ಹುಡುಗಿಯರು ಮತ್ತು ಅವರ ತರಬೇತುದಾರರ ಮೇಲೆ ದುಃಖದ ಪರ್ವತವೇ ಒಡೆದು ಬಿದ್ದಿದೆ. ಈ ಮಧ್ಯೆ, 40 ವರ್ಷಗಳಿಂದ ಮೀರತ್ನಲ್ಲಿ ಬಾಲಕಿಯರನ್ನು ಕುಸ್ತಿ ಚಾಂಪಿಯನ್ಗಳನ್ನಾಗಿ ಮಾಡುತ್ತಿರುವ ಜಬರ್ ಸಿಂಗ್ ಸೋಮ್ ಅವರು ಈ ಸುದ್ದಿಯಿಂದ ತೀವ್ರ ದುಃಖಿತರಾಗಿದ್ದಾರೆ. ಒಂದು ಸಣ್ಣ ತಪ್ಪು ಎಲ್ಲಾ ಭರವಸೆಗಳನ್ನು ಹಾಳುಮಾಡಿದೆ ಎಂದು ಅವರು ದುಃಖದಿಂದ ಹೇಳುತ್ತಾರೆ.
ಹೌದು.. ಏಕೆಂದರೆ ವಿನೇಶ್ ಫೋಗಟ್ ಅವರು ಈ ಬಾರಿ ಕುಸ್ತಿಯಲ್ಲಿ ಗೆಲ್ಲಲೇಬೇಕೆಂಬ ಹಠದಿಂದ ತನ್ನ ತೂಕವನ್ನು ಸುಮಾರು 13 ಕೆಜಿಯಷ್ಟು ಕಡಿಮೆ ಮಾಡಿಕೊಂಡಿದ್ದರು ಎಂದು ಕುಸ್ತಿ ತರಬೇತುದಾರ ಜಬರ್ ಸಿಂಗ್ ಸೋಮ್ ಹೇಳುತ್ತಾರೆ. ಅವರು 50 ಕೆಜಿ ವಿಭಾಗದಲ್ಲಿ ಆಡುತ್ತಿದ್ದರಿಂದ, ರಾತ್ರಿಯಲ್ಲಿ ಏನನ್ನಾದರೂ ತಿನ್ನುವುದರಿಂದ ತೂಕವು ಹೆಚ್ಚಾಗುವ ಆತಂಕವಿತ್ತು, ಒಂದು ವೇಳೆ ತಿಂದರೆ ಕೆಲವು ಗಂಟೆಗಳವರೆಗೆ ತೂಕ ಕಡಿಮೆಯಾಗುವುದಿಲ್ಲ, ಆದರೆ ವಿನೇಶ್ ರಾತ್ರಿಯಿಡೀ ಒಂದು ತೊಟ್ಟು ನೀರನ್ನೂ ಕುಡಿದಿಲ್ಲ ಎಂದು ತರಬೇತುದಾರ ಜಬರ್ ಸಿಂಗ್ ಸೋಮ್ ಹೇಳಿದ್ದಾರೆ.
ಫೈನಲ್ ಆಟಕ್ಕೂ ಮುನ್ನ ತೂಕ ಮಾಡುವಾಗ ವಿನೇಶ್ನ ತೂಕವು 50 ಕಿಲೋಗ್ರಾಂಗಳಿಗಿಂತ ಕೆಲವೇ ಗ್ರಾಂಗಳಷ್ಟು ಹೆಚ್ಚಿತ್ತು. ಈ ಕಾರಣಕ್ಕಾಗಿ ಆವರನ್ನು ಅನರ್ಹ ಎಂದು ಘೋಷಿಸಲಾಗಿದೆ. ಒಂದು ಸಣ್ಣ ತಪ್ಪಿನಿಂದಾಗಿ ಕೋಟ್ಯಂತರ ಭಾರತೀಯರಿಗೆ ಸಿಡಿಲು ಬಡಿದಿದೆ. ಈಗ ಈ ವಿಷಯದ ಬಗ್ಗೆ ಯೋಚಿಸಲು ಮಾತ್ರ ಬಾಕಿ ಉಳಿದಿದೆ ಎಂದು ಕುಸ್ತಿ ತರಬೇತುದಾರ ಜಬರ್ ಸಿಂಗ್ ಹೇಳುತ್ತಾರೆ.
ವಿನೇಶ್ ಫೋಗಟ್ರ ಹುಮ್ಮಸ್ಸು, ಸಮರ್ಪಣಾ ಭಾವ, ಸಾಧಿಸುವ ಹಠದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದಿರುವ ಜಬರ್ ಸಿಂಗ್ ಸೋಮ್, ಮುಂಬರುವ ಚಾಂಪಿಯನ್ಶಿಪ್ನಲ್ಲಿ ವಿನೇಶ್ ಮತ್ತೆ ಹೋರಾಡುತ್ತಾರೆ ಮತ್ತು ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಅವರಿಗೆ ತಿಳಿದಿದೆ, ಆದರೆ ಸದ್ಯಕ್ಕೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಏನೂ ಆಗುವುದಿಲ್ಲ. ಏಕೆಂದರೆ IOC ನಿಯಮಗಳು ತುಂಬಾ ಕಠಿಣವಾಗಿವೆ. ಈ ಘಟನೆ ಎಲ್ಲಾ ಕುಸ್ತಿ ಆಟಗಾರರನ್ನು ಬೆಚ್ಚಿ ಬೀಳಿಸಿದೆ ಎನ್ನುತ್ತಾರೆ ಜಬರ್ ಸಿಂಗ್ ಸೋಮ್.