ಸಾಮಾನ್ಯವಾಗಿ ಲವ್ ಪ್ರಪೋಸ್ ವಿಚಾರಕ್ಕೆ ಬಂದ್ರೆ ಹುಡುಗರೇ ಹುಡುಗಿಯರಿಗೆ ಪ್ರಪೋಸ್ ಮಾಡೋದು. ಇದರಲ್ಲಿ ಹುಡುಗರು ಪ್ರಪೋಸ್ ಮಾಡಿದಾಗ ಹುಡುಗಿಯರು ಅಷ್ಟು ಸುಲಭವಾಗಿ ಒಪ್ಪಲ್ಲ. ಇದಕ್ಕೆ ಹಲವು ಕಾರಣಗಳು ಇದೆ. ಇಂದಿನ ಸಂಚಿಕೆಯಲ್ಲಿ ಈ ವಿಚಾರವನ್ನು ತಿಳಿಸುತ್ತೇವೆ ನೋಡಿ!
ಹುಡುಗಿಯೂ ಹುಡುಗನ ಪ್ರೀತಿಗೆ ತಕ್ಷಣವೇ ಒಪ್ಪಿಗೆ ಸೂಚಿಸದೇ ಇರುವುದಕ್ಕೆ ಆತನ ಗುಣ ಸ್ವಭಾವ ಹೇಗಿದೆ ಎನ್ನುವ ಭಯ ಆಕೆಯಲ್ಲಿ ಇರುತ್ತದೆ. ಆತನು ಒಳ್ಳೆಯವನೇ ಎಂದು ಪರೀಕ್ಷಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತಾಳೆ. ಆತನ ಗುಣವನ್ನು ಪರೀಕ್ಷಿಸಿ ಹುಡುಗನು ಒಳ್ಳೆಯವನಾಗಿದ್ದರೆ ಆಕೆಯಿಂದ ಪ್ರೀತಿಗೆ ಸಮ್ಮತಿ ಸಿಗುತ್ತದೆ.
ತನ್ನನ್ನು ಪ್ರೀತಿಸುವ ಹುಡುಗನ ಪ್ರೀತಿಯೂ ನಿಜವೇ ಅಥವಾ ಸುಳ್ಳಾ, ಟೈಮ್ ಪಾಸ್ ಪ್ರೀತಿ ಮಾಡಲು ತನ್ನ ಹಿಂದೆ ಬಿದ್ದಿದ್ದಾನೆಯೇ ಎಂದು ತಿಳಿದುಕೊಳ್ಳುವ ಸಲುವಾಗಿ ತಕ್ಷಣವೇ ಯಾವುದೇ ಪ್ರತಿಕ್ರಿಯೆಯನ್ನು ಕೊಡುವುದಿಲ್ಲ.
ಹುಡುಗನು ಲವ್ ಪ್ರಪೋಸ್ ಮಾಡಿದ ಕೂಡಲೇ ತನ್ನ ಮನೆಯವರು ಹೇಗೆ ಪ್ರತಿಕ್ರಿಯೆ ನೀಡಬಹುದು ಎನ್ನುವ ಭಯವೊಂದು ಆಕೆಯಲ್ಲಿ ಕಾಡುತ್ತದೆ. ಹೀಗಾಗಿ ಹುಡುಗಿಯೂ ಹುಡುಗನನ್ನು ಎಲ್ಲಾ ರೀತಿಯಿಂದಲು ಪರೀಕ್ಷಿಸಿ ಮನೆಯವರು ಪ್ರೀತಿ ಪ್ರೇಮ ಬೆಂಬಲವಿದ್ದರೆ ಮಾತ್ರ ಸಮ್ಮತಿ ಸೂಚಿಸುತ್ತಾಳೆ.
ಈಗಿನ ಕಾಲದಲ್ಲಿ ಒಳ್ಳೆಯ ಕುಟುಂಬದಿಂದ ಬಂದವನು ಎಂದು ಹೇಳಿಕೊಂಡು ಪ್ರೀತಿಗೆ ಬೀಳಿಸಿಕೊಳ್ಳುವವರು ಹೆಚ್ಚಾಗಿದ್ದಾರೆ. ಹುಡುಗನ ಹಿನ್ನಲೆಯ ಜೊತೆಗೆ ಆತನ ಕುಟುಂಬದ ಬಗ್ಗೆ ತಿಳಿದುಕೊಂಡು ಎಲ್ಲಾ ರೀತಿಯಲ್ಲಿ ಹೊಂದಾಣಿಕೆ ಆದರೆ ಮಾತ್ರ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡುತ್ತಾಳೆ