ಟೀಂ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ ವರ್ಮಾ ಅವರ ನಾಲ್ಕು ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದ್ದು, ಬಾಂದ್ರಾ ಕೌಟುಂಬಿಕ ನ್ಯಾಯಾಲಯದಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಇಬ್ಬರೂ ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ಅಂತಿಮ ವಿಚ್ಛೇದನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ ಅಧಿಕೃತವಾಗಿ ಬೇರೆ ಬೇರೆಯಾಗಿದ್ದಾರೆ. ಯುಜುವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ ವಿಚ್ಛೇದನದ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಮಾತು ಕೇಳಿ ಬರುತ್ತಿದ್ದವು. ಇಬ್ಬರ ನಡುವೆ ಸಂಬಂಧ ಸರಿಯಿಲ್ಲ ಎನ್ನುವ ಬಗ್ಗೆ ವದಂತಿಗಳು ಹರಿದಾಡುತ್ತಿರುವಾಗಲೇ, ಯಜುವೇಂದ್ರ ಮತ್ತು ಧನಶ್ರೀ ವಿಚ್ಚೇದನ ಪಡೆದಿದ್ದಾರೆ.
ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಪ್ರತಿಭಟನೆ ; ಕೊಲ್ಲಾಪುರ ಬಸ್ ಸಂಚಾರ ಸ್ಥಗಿತ
ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ ಅಂತಿಮ ವಿಚಾರಣೆಯ ಮೊದಲು, ನ್ಯಾಯಾಧೀಶರು ಇಬ್ಬರನ್ನೂ ಸಲಹೆಗಾರರ ಬಳಿಗೆ ಕಳುಹಿಸಿದ್ದರು. ಈ ಸಮಾಲೋಚನೆಯು ಸುಮಾರು 45 ನಿಮಿಷಗಳ ಕಾಲ ನಡೆಯಿತು.
ನ್ಯಾಯಾಧೀಶರು ಧನಶ್ರೀ ಮತ್ತು ಯುಜ್ವೇಂದ್ರ ಅವರಿಗೆ ಪ್ರಶ್ನೆಗಳನ್ನು ಕೇಳಿದಾಗ, ಇಬ್ಬರೂ ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆಯುತ್ತಿರುವುದಾಗಿ ಹೇಳಿದರು.
ಇಷ್ಟು ಮಾತ್ರವಲ್ಲದೆ, ವಿಚ್ಚೇದನಕ್ಕೂ ಮುನ್ನ ಇಬ್ಬರೂ ಕಳೆದ 18 ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಎಂದು ಧನಶ್ರೀ ನ್ಯಾಯಾಧೀಶರಿಗೆ ತಿಳಿಸಿದರು. ಪ್ರಶ್ನೋತ್ತರ ಅವಧಿಯ ನಂತರ, ನ್ಯಾಯಾಧೀಶರು ಇಂದಿನಿಂದ ಇಬ್ಬರೂ ಗಂಡ ಹೆಂಡತಿಯರಲ್ಲ ಎಂದು ಘೋಷಿಸಿದರು.ನಾಲ್ಕು ವರ್ಷಗಳ ಹಿಂದೆ ಯುಜುವೇಂದ್ರ ಮತ್ತು ಧನಶ್ರೀ ಪ್ರೇಮ ವಿವಾಹವಾಗಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಯುಜ್ವೇಂದ್ರ ಧನಶ್ರೀ 60 ಕೋಟಿ ರೂಪಾಯಿಗಳ ದೊಡ್ಡ ಜೀವನಾಂಶವನ್ನು ಪಾವತಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಇದು ಇನ್ನೂ ದೃಢೀಕರಿಸಲ್ಪಟ್ಟಿಲ್ಲ. ಒಂದು ವೇಳೆ ಅದು ನಿಜವಾಗಿದ್ದರೆ ಈ ಮೊತ್ತವು ಯುಜ್ವೇಂದ್ರ ಚಾಹಲ್ಗೆ ದೊಡ್ಡದಾಗಿರಬಹುದು