ಬಿಗ್ ಬಾಸ್ನಲ್ಲಿ ಇದೀಗ ಡಬಲ್ ಎಲಿಮಿನೇಷನ್ ನಡೆಯಲಿದೆ. ಈ ವಾರಾಂತ್ಯದಲ್ಲಿ ಇಬ್ಬರು ಮನೆಯಿಂದ ಗಂಟು ಮೂಟೆ ಕಟ್ಟೋದು ಕನ್ಫರ್ಮ್ ಆಗಿದೆ. ಅದಲ್ಲದೆ ಧನರಾಜ್ ಮಾಡಿದ ಒಂದು ತಪ್ಪಿನಿಂದ ಮಿಡ್ ವೀಕ್ ಎಲಿಮಿನೇಷನ್ ರದ್ದಾಗಿದ್ದು, ಹೊಸದಾಗಿ ನಾಮಿನೇಷನ್ ಪ್ರತಿಕ್ರಿಯೆ ನಡೆದಿದೆ. ಇದರಲ್ಲಿ ಹನುಮಂತನ ಅಚ್ಚರಿಯ ನಿರ್ಧಾರದಿಂದ ಮೋಕ್ಷಿತಾ ನಾಮಿನೇಷನ್ ಹಾಟ್ ಸೀಟ್ನಿಂದ ಬಚಾವ್ ಆಗಿದ್ದು, ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ.
ನಿನ್ನೆಯ ಸಂಚಿಕೆಯಲ್ಲಿ ಕ್ಯಾಪ್ಟನ್ ಹನುಮಂತನಿಗೆ ಬಿಗ್ ಬಾಸ್ ಒಂದು ವಿಶೇಷ ಅಧಿಕಾರ ನೀಡಲಾಯಿತು. ಆಗ ನಾಮಿನೇಟ್ ಆದ ಒಬ್ಬರನ್ನು ಸೇಫ್ ಮಾಡಲು ಅವರಿಗೆ ಅವಕಾಶ ನೀಡಲಾಯಿತು. ಹನುಮಂತ ಅವರು ಗೆಳಯ ಧನರಾಜ್ ಹೆಸರು ಹೇಳಬಹುದು ಎಂದು ಅನೇಕರು ಊಹಿಸಿರಬಹುದು. ಆದರೆ ಆಗಿದ್ದೇ ಬೇರೆ. ಹನುಮಂತ ಅವರು ಮೋಕ್ಷಿತಾ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಮಹಿಳೆಯರು ಚಳಿಗಾಲದಲ್ಲಿ ಎಳ್ಳು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?
ಮೋಕ್ಷಿತಾ ಚೆನ್ನಾಗಿ ಆಟ ಆಡುತ್ತಿದ್ದಾರೆ. ಹಾಡು ಹೇಳಿ ಮನರಂಜನೆ ನೀಡುತ್ತಾರೆ. ಒಳ್ಳೆಯ ಮನಸ್ಸಿನ ವ್ಯಕ್ತಿ. ಕಲ್ಮಶ ಇಲ್ಲ. ತಪ್ಪನ್ನು ಒಪ್ಪಿಕೊಳ್ಳುತ್ತಾರೆ ಎಂಬ ಕಾರಣವನ್ನು ನೀಡಿ ಮೋಕ್ಷಿತಾನ ನಾಮಿನೇಷನ್ನಿಂದ ಹನುಮಂತ ಬಚಾವ್ ಮಾಡಿದ್ದಾರೆ. ಒಟ್ಟಾರೆಯಾಗಿ ಮೋಕ್ಷಿತಾ ಅವರಿಗೆ ಈ ಚಾನ್ಸ್ ಸಿಕ್ಕಿದ್ದು ಹನುಮಂತನ ಕೃಪೆಯಿಂದಲೇ ಎಂಬುದು ನಿಜ.
ಹನುಮಂತ ತೆಗೆದುಕೊಂಡ ಈ ನಿರ್ಧಾರವನ್ನು ಬಹುತೇಕ ಎಲ್ಲರೂ ಒಪ್ಪಿಕೊಂಡರು. ಇದರಿಂದ ಮೋಕ್ಷಿತಾಗೂ ಖುಷಿಯಾಯ್ತು. ನಾಮಿನೇಷನ್ನಿಂದ ಬಚಾವ್ ಮಾಡಿದ ಹನುಮಂತಗೆ ಧನ್ಯವಾದ ತಿಳಿಸಿದರು. ಇನ್ನೂ ಫಿನಾಲೆ ವಾರಕ್ಕೆ ಹನುಮಂತ, ಮೋಕ್ಷಿತಾ ಜೊತೆ ನಾಮಿನೇಟ್ ಆಗದೇ ಇದ್ದ ತ್ರಿವಿಕ್ರಮ್ ಕೂಡ ಎಂಟ್ರಿ ಕೊಟ್ಟಿದ್ದಾರೆ.