ಬೆಂಗಳೂರು: ಗೋ ಮಾತೆ ಪೂಜೆ ಮಾಡುವ ದೇಶದಲ್ಲಿ ಹೀಗೆ ನಡೆದಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೊನ್ನೆಯ ದಿನ ದುರ್ಘಟನೆ ನಡೆದಿದೆ.
ಯಾವ ಪುಣ್ಯಭೂಮಿ ಮೇಲೆ ಗೋ ಮಾತೆ ಪೂಜೆ ಮಾಡುತ್ತೇವೋ ಅಂತಹ ಗೋವಿಗೆ ಏನಾಗಿದೆ ಅಂತ ರಾಜ್ಯ, ದೇಶದ ಜನ ಗಮನಿಸಿದ್ದಾರೆ. ಇವತ್ತು ಹಸು ಮಾಲೀಕ ಕರ್ಣನಿಗೆ ಧೈರ್ಯ ಹೇಳಿದ್ದೇವೆ. ಗೋ ಮಾತೆ ಪೂಜೆ ಮಾಡುವ ದೇಶದಲ್ಲಿ ಹೀಗೆ ನಡೆದಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಖಂಡಿಸಿದರು.
Personal Loan: ಗಮನಿಸಿ.. ಪರ್ಸನಲ್ ಲೋನ್ ಪಡೆಯಲು RBI ನಿಂದ ಹೊಸ ರೂಲ್ಸ್.! ಬದಲಾವಣೆ ಏನು ಗೊತ್ತಾ..?
ಸಿದ್ದರಾಮಯ್ಯ ಸಿಎಂ ಆದ ಮೇಲೆ ಗೋ ರಕ್ಷಣೆ ಆಗುತ್ತಿಲ್ಲ. ಈ ಘಟನೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಗೆ ಒಳ್ಳೆಯದು ಮಾಡಲ್ಲ, ಇವರ ಪಾಪದ ಕೊಡ ತುಂಬಿದೆ. ಯಾರೋ ಬಡಪಾಯಿಯನ್ನು ಅರೆಸ್ಟ್ ಮಾಡಿದ್ದಾರೆ. ಹಸು ಮಾಲೀಕ ಕರ್ಣ ಧೈರ್ಯವಾಗಿ ಎದುರಿಸಿದ್ದಾನೆ. ನಾವು ಧೈರ್ಯ ಹೇಳಿ ಗೋ ಪೂಜೆ ಮಾಡಿದ್ದೇವೆ ಎಂದರು.