ಕಲಬುರಗಿ: ನಮ್ಮ ಅತ್ತೆ ಬೇಗ ಹುಷಾರಾಗಿ ಬರಲಪ್ಪಾ ಅಂತ ದೇವರ ಬಳಿ ಪಾರ್ಥಿಸುವ ಸೊಸೆ ಬಗ್ಗೆ ಕೇಳಿರುತ್ತೇವೆ. ನೋಡಿರುತ್ತೇವೆ. ಆದರೆ ಇಲ್ಲೊಬ್ಬಳು ಸೊಸೆ ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ ಎಂದು ದೇವರಿಗೆ ಹರಕೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಕಲಬುರಗಿಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದಲ್ಲಿರುವ ಭಾಗ್ಯವಂತಿ ದೇವಿ ದೇವಾಲಯ ಆ ಭಾಗದಲ್ಲಿ ಸಾಕಷ್ಟು ಖ್ಯಾತಿ ಪಡೆದಿದೆ.
ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಬಂದು ದರ್ಶನ ಪಡೆದುಕೊಂಡು ಹೋಗುತ್ತಾರೆ. ಆದರೆ ಭಾಗ್ಯವಂತಿ ದೇವಿಯ ಗುಡಿಯಲ್ಲಿರುವ ಕಾಣಿಕೆ ಹುಂಡಿಗೆ ಸಾವಿರಾರು ಜನರು ಹಣ ಹಾಕಿದ್ದಾರೆ. ಇದರಲ್ಲಿ ಒಬ್ಬರು 20 ರೂಪಾಯಿ ನೋಟಿನ ಮೇಲೆ ‘ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು ತಾಯಿ’ ಎಂದು ಬರೆದು ಹುಂಡಿಗೆ ಹಾಕಿದ್ದಾರೆ.
Pearl Farming: ರೈತರೇ ಗಮನಿಸಿ.. ಮುತ್ತು ಕೃಷಿಯಲ್ಲಿದೆ ಭರ್ಜರಿ ಲಾಭ..! ವರ್ಷಕ್ಕೆ 10 ಲಕ್ಷ ಗಳಿಸಬಹುದು
ಭಾಗ್ಯವಂತಿ ದೇವಿಯ ಹುಂಡಿ ಎಣಿಕೆ ಮಾಡುವ ವೇಳೆ ಈ ರೀತಿ ಬರೆದಿರುವುದು ಪತ್ತೆ ಆಗಿದೆ. ಸದ್ಯ ಭಾಗ್ಯವಂತಿ ದೇವಿ ದೇವಾಲಯದ ಹುಂಡಿಯಲ್ಲಿ 60 ಲಕ್ಷ ರೂಪಾಯಿ ನಗದು, 200 ಗ್ರಾಂ ಚಿನ್ನಾಭರಣ ಹಾಗೂ ಒಂದು ಕೆಜಿ ಬೆಳ್ಳಿ ಜಮಾವಾಗಿದೆ.
ಸದ್ಯ ಹೆಚ್ಚಿನ ಮನೆಗಳಲ್ಲಿ ಅತ್ತೆ-ಸೊಸೆ ಹಾವು-ಮುಂಗುಸಿ ತರ ಇರುತ್ತಾರೆ. ಹಾಗಾಗಿ ಬಹುತೇಕ ಸೊಸೆಯಂದಿರು ಅತ್ತೆ ಇರುವ ಮನೆಗೆ ಹೋಗಲು ಹಿಂದೇಟು ಹಾಕುತ್ತಿರುತ್ತಾರೆ. ಅತ್ತೆ ಸಾಯಲಿ ಎಂದು ಸೊಸೆಯೊಬ್ಬರು ನೋಟಿನ ಮೇಲೆ ಬರೆದು ದೇವಸ್ಥಾನದ ಹುಂಡಿಯಲ್ಲಿ ಹಾಕಿದ್ದಾರೆನ್ನಲಾದ ನೋಟು ಈಗ ಎಲ್ಲ ಕಡೆ ವೈರಲ್ ಆಗಿದೆ.