ಬೆಂಗಳೂರು: ಇದು ಪಾಪರ್ ಸರ್ಕಾರ. ಸರ್ಕಾರ ಕೂಡಲೇ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ವಿಪಕ್ಷ ನಾಯಕ ಅಶೋಕ್ ಸವಾಲ್ ಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಸವರಾಜ ಬೊಮ್ಮಾಯಿ ಇದ್ದಾಗ ಎಷ್ಟು ಹಣ ಬಿಡುಗಡೆ ಮಾಡಿದ್ರು ಎಂದು ಕಾಂಗ್ರೆಸ್ನವರು ಮೊದಲು ನೋಡಲಿ. ಇದು ಪಾಪರ್ ಸರ್ಕಾರ. ಸರ್ಕಾರ ಕೂಡಲೇ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಸವಾಲ್ ಹಾಕಿದ್ದಾರೆ.
ಕಾಂಗ್ರೆಸ್ನವರು ಮನೆ ಹಾಳರು, ಅವರೇ ಸಾಲ ಮಾಡಿದ್ದು. ಈಗ ನಮ್ಮ ಮೇಲೆ ಹೇಳ್ತಾರೆ. 60 ವರ್ಷ ಕಾಂಗ್ರೆಸ್ ಆಡಳಿತ ಮಾಡಿತ್ತು. ಆಗ ಸಾಲ ಮಾಡಿರಲಿಲ್ಲವಾ? ಅಂಕಿಅಂಶಗಳನ್ನ ಬಿಡುಗಡೆ ಮಾಡಿ. ಕಾಂಗ್ರೆಸ್ 60 ವರ್ಷಗಳ ಅಂಕಿಅಂಶಗಳನ್ನ ಬಿಡುಗಡೆ ಮಾಡಿ. ನಾವು 9 ವರ್ಷಗಳ ಅಂಕಿಅಂಶಗಳನ್ನ ಬಿಡುಗಡೆ ಮಾಡ್ತೀವಿ ಎಂದಿದ್ದಾರೆ.
ಮಹಿಳೆಯರು ಚಳಿಗಾಲದಲ್ಲಿ ಎಳ್ಳು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?
ಸಿದ್ದರಾಮಯ್ಯ ಸಾಲ ಮಾಡದೇ ಬಜೆಟ್ ಮಾಡಿದ್ರಾ? ಹೇಳಲಿ. ಬೊಮ್ಮಾಯಿ ಸರ್ ಪ್ಲಸ್ ಬಜೆಟ್ ಮಾಡಿದ್ರು. ಯಾವುದೇ ಬೆಲೆ ಏರಿಕೆ ಮಾಡಿರಲಿಲ್ಲ. ಮನೆ ಹಾಳು ಕಾಂಗ್ರೆಸ್ನವರು ಬೆಲೆ ಜಾಸ್ತಿ ಮಾಡಿದ್ದಾರೆ. ಸಿದ್ದರಾಮಯ್ಯ 14 ಬಜೆಟ್ ಮಾಡಿದ್ರು ಸಾಲ ಇಲ್ಲದೆ ಮಾಡಿದ್ರಾ? ತೆರಿಗೆ ಇಲ್ಲದೆ ಮಾಡಿದ್ರಾ? ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.