ಬೆಳಗಾವಿ: ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಜಂಟಿಯಾಗಿ ಸುವರ್ಣ ಸೌಧದಲ್ಲಿ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿ ಆಧಿಕಾರಿಗಳಿಗೆ ಸಲಹೆ ಸೂಚನೆ ಕೊಟ್ರು. ಇದಾದ್ಮೇಲೆ ಮಾತನಾಡಿದ ಸ್ಪೀಕರ್ ಯುಟಿ ಖಾದರ್ ಅಧಿವೇಶನಕ್ಕೆ ಬರುವ ಶಾಸಕರು, ಅಧಿಕಾರಿಗಳು, ಪ್ರತ್ರಕರ್ತರು ಸೇರಿದಂತೆ ಎಲ್ಲರಿಗೂ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಜನಸಾಮಾನ್ಯರಿಗೂ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ ಅಧಿವೇಶನಕ್ಕೆ ಮೊದಲು ಬರುವ ಶಾಸಕರಿಗೆ ಬಹುಮಾನ ಕೊಡಲಾಗುತ್ತದೆ, ರಾಜ್ಯ,ರಾಷ್ಟದ ಚಿಹ್ನೆ ಅಳವಡಿಸಿರುವ ವಿಶೇಷ ಟೀ ಕಪ್ ಕೊಡಲಾಗುವುದು. ಕರ್ನಾಟಕ ಗೂಡ್ಸ್ ಅಂಡ್ ಸರ್ವಿಸ್ , ಸೇರಿದಂತೆ 3 ಬಿಲ್ ಗಳು ಈಗಾಗಲೇ ಬಂದಿದಾವೆ ಇನ್ನು 5-7 ಬಿಲ್ ಗಳು ಬರಬಹುದು. 2,507 ಪ್ರಶ್ನೆಗಳು ಈಗಾಗ್ಲೆ ಬಂದಿವೆ ರಾಜ್ಯದ ಸಮಸ್ಯೆಗಳು ಸೇರಿದಂತೆ ಹೆಚ್ಚು ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ ಕೊಡ್ತೀವಿ ಎಂದ್ರು..