ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ರಕ್ಷಕ್ ಬುಲೆಟ್ ಬಿಗ್’ ಮನೆಯೊಳಗಿನ ಅನುಭವ, ಸ್ಪರ್ಧಿಗಳ ಕುರಿತಾದ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದು, ಮುಂದಿನ ವಾರ ತಮ್ಮ ಜಾಗದಲ್ಲಿ ಯಾವ ಸ್ಪರ್ಧಿ ಇರಬಹುದು ಎಂಬುದನ್ನು ಇದೀಗ ಬಹಿರಂಗವಾಗಿ ತಿಳಿಸಿದ್ದಾರೆ.
ಮೊದಲು ಟಾಸ್ಕ್ ಬಗ್ಗೆ ಮಾತನಾಡಿದ ರಕ್ಷಕ್, ‘ಫನ್ ಫ್ರೈಡೆಯಲ್ಲಿನ ಮ್ಯೂಸಿಕಲ್ ಪಾಟ್ ಟಾಸ್ಕ್ ಸಖತ್ ಮಜಾ ಕೊಟ್ಟಿತ್ತು. ಫನ್ ಫ್ರೈಡೆ ಅಂದ್ರೇ ಮಜವಾಗಿರೋ ಚುಟುವಟಿಕೆ. ಅದನ್ನೂ ಕೆಲವರು ಸಿಕ್ಕಾಪಟ್ಟೆ ಗಂಭೀರವಾಗೇ ಆಡುತ್ತಾರೆ. ಫನ್ ಅನ್ನೋ ಶಬ್ದಕ್ಕೆ ಹಾಳುಮಾಡಬಾರದು. ಬೇರೆ ಟ್ರಿಗರ್ ಆಗುವ ಟಾಸ್ಕ್ ಇರುತ್ತದೆ. ಅದಕ್ಕೆ ಕುಪಿತವಾಗಲಿ. ಆದ್ರೆ ಮಜವಾಗಿ ಆಡುವ ಆಟವನ್ನು ಮಜವಾಗಿಯೇ ಆಡಿ. ಎಂಜಾಯ್ ಮಾಡಿಕೊಂಡು ಆಡಬೇಕು’ ಎಂದು ಹೇಳಿದರು.
ಮನೆಯೊಳಗಿನ ಸ್ಪರ್ಧಿಗಳಲ್ಲಿ ಜೆನ್ಯೂನ್ ಅಂದ್ರೆ ನಮ್ರತಾ. ಸ್ಟ್ರಾಟಜಿ ಅಂತ ಬಂದ್ರೆ ವಿನಯ್. ಫೇಕ್ ಅಂತ ಹೇಳಕ್ಕಾಗಲ್ಲ. ಆದರೆ ಬೇಡದಿರೋ ವಿಷಯಕ್ಕೆ ನಾಟಕ ಮಾಡಿದ್ದಾರೆ ಭಾಗ್ಯಶ್ರೀ. ಅಳೋದು ಒಂದೇ ಅಲ್ಲ ಲೈಫ್ನಲ್ಲಿ. ಅದನ್ನು ಗಟ್ಟಿಯಾಗಿ ಎದುರಿಸಬೇಕು. ಸತ್ಯವನ್ನು ಮುಖಕ್ಕೆ ಹೊಡೆದ ಹಾಗೆ ಹೇಳೋರು ವಿನಯ್. ಮತ್ತೆ ಫೈನಲ್ನಲ್ಲಿ ನಮ್ರತಾ ಇರಲೇಬೇಕು. ಕಾರ್ತಿಕ್ ಬರಬಹುದೇನೋ, ನಮ್ರತಾ ವಿನ್ನರ್ ಆಗಬೇಕು’ ಎಂದು ರಕ್ಷಕ್ ಹೇಳಿದ್ದಾರೆ.
ಈ ವಾರ ಕಡಿಮೆ ಪರ್ಫಾರ್ಮೆನ್ಸ್ ಕೊಟ್ಟಿದ್ದು ಪ್ರತಾಪ್. ಬಹುಶಃ ಮುಂದಿನ ವಾರ ನನ್ನ ಜಾಗದಲ್ಲಿ ಅವನು ಇರ್ತಾನೆ ಅಂದ್ಕೊಂಡಿದೀನಿ. ನಾನು ಒಬ್ಬರ ಜತೆ ಬಾಂಡಿಂಗ್ ಶುರುಮಾಡಿದ್ರೆ ಅದನ್ನು ಬ್ರೇಕ್ ಮಾಡಲ್ಲ. ನನ್ನಿಂದ ತಪ್ಪಾಗಿದ್ರೆ ಸಾರಿ ಕೇಳ್ತೀನಿ. ತಪ್ಪಾಗಿಲ್ಲದಿದ್ರೆ ತಲೆಕೆಡಿಸಿಕೊಳ್ಳಲ್ಲ’ ಎಂದರು