ಬೆಂಗಳೂರು: ನಾಡಿನ ಜನ ಬೆಲೆ ಏರಿಕೆಗೆ ತಯಾರಾಗಿ ಎಂದು ಈ ಸರ್ಕಾರ ಸಂದೇಶ ಕೊಡುತ್ತಿದೆ ಎಂದು ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೆಲೆ ಏರಿಕೆ ಅಚ್ಚರಿ ತರೋ ವಿಷಯ ಅಲ್ಲ. ರಾಜ್ಯದ ಜನರು ಟಿಕೆಟ್ ಬೆಲೆ ಏರಿಕೆಯನ್ನು 2-3 ದಿನಗಳಲ್ಲಿ ಮರೆತು ಹೋಗುತ್ತಾರೆ.
ಚಳಿಗಾಲದಲ್ಲೇ ಏಕೆ ಜಾಸ್ತಿ ಸೆಕ್ಸ್ ಮಾಡಬೇಕು ಅನಿಸುತ್ತೆ ಗೊತ್ತಾ..? ಇದಕ್ಕೆ ಕಾರಣ ಇಲ್ಲಿದೆ ನೋಡಿ
ಎರಡು ದಿನ ಆಕ್ರೋಶ ವ್ಯಕ್ತಪಡಿಸುತ್ತಾರೆ ಅಷ್ಟೇ. ಮೂರನೇ ದಿನ ಜನರೇ ಅಡ್ಜೆಸ್ಟ್ ಆಗುತ್ತಾರೆ. ಇದೇ ಸರ್ಕಾರ ಡೀಸೆಲ್, ಪೆಟ್ರೋಲ್ ಮೇಲೆ ಸೆಸ್ ಹಾಕಿದ್ದರೂ ಪ್ರತಿಭಟನೆ ಮಾಡಿದ್ರಾ? ಅದಕ್ಕೆ ಅಡ್ಜೆಸ್ಟ್ ಆದರು. ಸ್ಟಾಂಪ್ ಡ್ಯೂಟಿ ಜಾಸ್ತಿ ಮಾಡಿದರು. ಗೈಡ್ಲೈನ್ಸ್ ವ್ಯಾಲ್ಯೂ, ಮದ್ಯದ ದರ ಏರಿಕೆ ಮಾಡಿದರು. ಈಗ ನೀರಿನ ದರವೂ ಏರಿಕೆ ಆಗುತ್ತಂತೆ.
ನೀರಿನ ದರವೂ ಏರಿಕೆ ಆಗುತ್ತೆ. ಹಾಲಿನ ದರ ಏನಾಗಬಹುದು ಎಂದು ಈ ಸರ್ಕಾರ ಹೇಳುತ್ತಿದೆ. ಹೊಸ ವರ್ಷದಲ್ಲಿ ನಾಡಿನ ಜನ ಬೆಲೆ ಏರಿಕೆಗೆ ತಯಾರಾಗಿ ಎಂದು ಈ ಸರ್ಕಾರ ಸಂದೇಶ ಕೊಡುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.