ಬೆಂಗಳೂರು:ಸಿ ಟಿ ರವಿ ವಿಚಾರವಾಗಿ ಛಲವಾದಿ ನಾರಾಯಣಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.ಈ ಪ್ರಕರಣದಲ್ಲಿ ಏನಾಗ್ತಿದೆ ಅಂತ ಗೃಹ ಸಚಿವರು ಯಾವಾಗ್ಲೂ ತಮ್ಮ ಬಳಿ ಮಾಹಿತಿ ಇಲ್ಲ ಅಂತಾರೆ.ಗೃಹ ಸಚಿವರಿಗೆ ಸರಿಯಾದ ಮಾಹಿತಿಯನ್ನೇ ಈ ಸರ್ಕಾರ ಕೊಡ್ತಿಲ್ಲ.ಗೃಹ ಮಂತ್ರಿಯವರನ್ನೇ ಈ ಸರ್ಕಾರ ಕತ್ತಲೆಯಲ್ಲಿ ಇಟ್ಟಿದೆ, ಗೃಹ ಸಚಿವರನ್ನೇ ಮೂಲೆಗೆ ತಳ್ಳಿದೆ ಎಂದರು .
ನಮ್ಮ ಮೆಟ್ರೋ ದರ ಏರಿಕೆ ಸಂಬಂಧ ಕರೆಯಲಾಗಿದ್ದ ಸುದ್ದಿಗೋಷ್ಠಿ ಕ್ಯಾನ್ಸಲ್!
ಇನ್ನೂ ಆರೆಸೆಸ್, ಬಿಜೆಪಿ ಸಂವಿಧಾನ ವಿರೋಧಿಗಳು ಎಂಬ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಎಲ್ಲಾದರೂ ಸಂವಿಧಾನಕ್ಕೆ ವಿರುದ್ಧವಾಗಿ ಬಿಜೆಪಿ ನಡೆದುಕೊಂಡ ಒಂದೇ ಒಂದು ಘಟನೆ ತೋರಿಸಲಿ.
ಮೀಸಲಾತಿ ಪರ, ಸಂವಿಧಾನ ಪರ ಇರೋದು ಬಿಜೆಪಿ.ಕಾಂಗ್ರೆಸ್ ಸಂವಿಧಾನ ವಿರೋಧಿ ಪಕ್ಷ.ರಾಹುಲ್ ಗಾಂಧಿ ಭಾರತದ ವಿರುದ್ಧ ಹೋರಾಟ ಮಾಡ್ತಿದ್ದೇವೆ ಅಂದ್ರು ಹಾಗಾದ್ರೆ ರಾಹುಲ್ ಗಾಂಧಿಯವರನ್ನು ಉಚ್ಛಾಟಿಸಿ ನೋಡೋಣ.ರಾಹುಲ್ ಮಾನಸಿಕ ಸ್ಥಿಮಿತ ಸರಿ ಇದೆಯೇ ಅಂತ ಪ್ರಶ್ನೆ ಮಾಡಿ ನೋಡೋಣ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.