ಬೆಳಗಾವಿ : ರಾಜ್ಯದಲ್ಲಿ ನಡೆಯುತ್ತಿವೆ ಎನ್ನಲಾದ ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ವಿಶೇಷವಾದ ನೀತಿಯೊಂದನ್ನು ಜಾರಿ ಮಾಡಲು ಸರ್ಕಾರದಿಂದ ಚಿಂತನೆ ನಡೆದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.
ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಭಾರತಿ ಶೆಟ್ಟಿ, ಶರವಣ ಟಿ.ಎ., ಬಿ.ಎಂ.ಫಾರೂಖ್, ಸಿ.ಎನ್.ಮಂಜೇಗೌಡ ಅವರು ವಿಧಾನ ಪರಿಷತನಲ್ಲಿ ಗಮನ ಸೆಳೆಯುವ ಸೂಚನೆಯಡಿ ಕೇಳಿದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳನ್ನು ಹೇಗೆ ಬೇಧಿಸಬಹುದು ಎಂಬುದರ ಬಗ್ಗೆ ಆರೋಗ್ಯ ಇಲಾಖೆಯು ಎಚ್ಚೆತ್ತುಕೊಂಡು ಗಂಭೀರ ಚಿಂತನೆ ನಡೆಸಿದೆ.
Winter Health: ಚಳಿಗಾಲದಲ್ಲಿ ವಸಡು ಮತ್ತು ಹಲ್ಲುಗಳ ಆರೈಕೆ ಹೇಗೆ ಗೊತ್ತಾ: ಇಲ್ಲಿದೆ ಟಿಪ್ಸ್!
ಈ ಬಗ್ಗೆ ಅಂಕಿಸಂಖ್ಯೆಗಳನ್ನು ಸಂಗ್ರಹಿಸಿ, ಗುಪ್ತಚರವಾಗಿ ಮಾಹಿತಿ ಪಡೆದು ಇಲಾಖೆಯ ಕಾರ್ಯಾಚರಣೆಯನ್ನು ಬಲಗೊಳಿಸಲಾ ಗುವುದು ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಪಿಸಿಪಿಎನ್ಡಿಸಿ ಸೆಲ್ಗಳು ಕಾಲಕಾಲಕ್ಕೆ ಸಭೆ ನಡೆಸಿ ಜಿಲ್ಲಾ ಹಂತದಲ್ಲಿ ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣ ತಡೆಗೆ ಕಾರ್ಯಪ್ರವೃತ್ತವಾಗಿವೆ. ಸಕ್ರಿಯವಾಗಿ ಇನ್ನಷ್ಟು ಕಾರ್ಯಪ್ರವೃತ್ತವಾಗಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಪಿಸಿಪಿಎನ್ಡಿಟಿ ಸೆಲ್ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುವುದು ಎಂದು ಸಚಿವರು ತಿಳಿಸಿದರು.