ಜಪಾನ್ ದೇಶದಲ್ಲಿರುವ ಆಫ್ಬೀಟ್ ಪ್ರವಾಸಿ ತಾಣಗಳ ಉತ್ತೇಜನಕ್ಕಾಗಿ ಜಪಾನ್ ಏರ್ಲೈನ್ಸ್ ವಿದೇಶಿ ಪ್ರವಾಸಿಗರಿಗೆ ಫ್ರೀ ಫ್ಲೈಟ್ ಟಿಕೆಟ್ ನೀಡುವ ಭರ್ಜರಿ ಆಫರ್ ನೀಡಿದೆ. ಈ ಉಪಕ್ರಮವನ್ನು ಸೆಪ್ಟೆಂಬರ್ ತಿಂಗಳಿನಿಂದಲೇ ಪ್ರಾರಂಭಿಸಲಾಗಿದೆ. ಭಾರತ, ಅಮೇರಿಕಾ, ಕೆನಡಾ, ಮೆಕ್ಸಿಕೋ, ಥೈಲ್ಯಾಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವಿಯೆಟ್ನಾಂ, ಫಿಲಿಪೈನ್, ಇಂಡೋನೇಷ್ಯಾ, ಚೀನಾ ಮತ್ತು ತೈವಾನ್ ದೇಶದ ಜನರಿಗೆ ಈ ಭರ್ಜರಿ ಆಫರ್ ಅನ್ನು ನೀಡಿದೆ. ಭಾರತ ಸೇರಿದಂತೆ ಈ ಕೆಲ ದೇಶಗಳ ಜನರು ಜಪಾನ್ಗೆ ಪ್ರವಾಸ ಹೋಗಲು ಬಯಸಿದರೆ ಅವರಿಗೆ ಜಪಾನ್ ಏರ್ಲೈನ್ಸ್ ಫ್ರೀ ಟಿಕೆಟ್ ನೀಡಲಿದೆ.
Bagmati Express Train Accident: ರೈಲು ಅಪಘಾತಕ್ಕೆ ಕಾರಣ ಏನು?:ಒಡಿಶಾದಲ್ಲಿ ಏನಾಗಿತ್ತು?
ಉಚಿತ ಟಿಕೆಟ್ಗಳನ್ನು ಪಡೆಯಲು, ಪ್ರವಾಸಿಗರು ಜಪಾನ್ ಏರ್ಲೈನ್ಸ್ನೊಂದಿಗೆ ಅಂತರಾಷ್ಟ್ರೀಯ ರೌಂಡ್-ಟ್ರಿಪ್ ಟಿಕೆಟ್ಗಳನ್ನು ಬುಕ್ ಮಾಡಬೇಕಾಗುತ್ತದೆ. ಅದೇ ಟಿಕೆಟ್ ಖರೀದಿಯ ಸಮಯದಲ್ಲಿ ಆಫರ್ನಲ್ಲಿ ದೇಶೀಯ ವಿಮಾನವನ್ನು ಸಹ ಕಾಯ್ದಿರಿಸಬೇಕು. ಈ ಒಂದು ಆಫರ್ ಯಾವಾಗ ಲಾಸ್ಟ್ ಎಂಬುದನ್ನು ಇನ್ನೂ ನಿಗದಿಪಡಿಸಲಾಗಿಲ್ಲ ಎಂದು ಜಪಾನ್ ಏರ್ಲೈನ್ಸ್ನ ವಕ್ತಾರರು ಹೇಳಿದ್ದಾರೆ.
ಕ್ಯರೇಟೆಡ್ ಕ್ಯೋಟೋ ಎಂಬ ಟ್ರಾವೆಲ್ ಏಜೆನ್ಸಿಯ ಸ್ಥಾಪಕರಾದ ಸಾರಾ ಐಕೊ, “ರಾಜಧಾನಿಯಲ್ಲಿನ ಪ್ರವಾಸೋದ್ಯಮವನ್ನು ಕಡಿಮೆ ಮಾಡಿ ನಮ್ಮ ದೇಶದ ಆಫ್ ಬೀಟ್ ಸ್ಥಳಗಳ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಉಪಕ್ರಮವನ್ನು ಜಾರಿಗೆ ತರಲಾಗಿದೆ” ಎಂಬ ವಿಚಾರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದು ತುಂಬಾನೇ ಉತ್ತಮ ಉಪಕ್ರಮ ಆದರೆ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆಯೋ ಗೊತ್ತಿಲ್ಲ. ಯಾಕಂದ್ರೆ ಆಫ್ ಬೀಟ್ ಸ್ಥಳಗಳೊಂದಿಗೆ ಹೀಗೆ ಬರುವ ಪ್ರವಾಸಿಗರು ಪ್ರಮುಖ ನಗರಗಳಿಗೂ ಭೇಟಿ ನೀಡುವ ಸಾಧ್ಯತೆ ಇರುತ್ತದೆ.