ನಮ್ಮ ದೈನಂದಿನ ಬಹುತೇಕ ಚಟುವಟಿಕೆಗಳಿಗೆ ಸ್ಮಾರ್ಟ್ ಫೋನ್ ನೆರವಾಗುತ್ತದೆ. ಹೀಗೆ ನಿರಂತರ ಸ್ಮಾರ್ಟ್ ಫೋನ್ ಬಳಕೆ ಸಹಜವಾಗಿಯೇ ಬ್ಯಾಟರಿಯನ್ನು ಖಾಲಿ ಮಾಡುತ್ತದೆ. ಹೀಗಾಗಿ, ಆಗಾಗ ಬ್ಯಾಟರಿ ಚಾರ್ಜ್ ಕೂಡಾ ಮಾಡುತ್ತಲೇ ಇರಬೇಕಾಗುತ್ತದೆ. ಆದರೆ, ನಮ್ಮ ಆಂಡ್ರಾಯ್ಡ್ ಫೋನ್ನ ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಕೆಲವೊಂದು ಸರಳ ಹಾಗೂ ಪರಿಣಾಮಕಾರಿ ಮಾರ್ಗಗಳೂ ಇವೆ. ಅವುಗಳ ಬಗ್ಗೆ ಇಲ್ಲಿ ನೋಡೋಣ
ಬ್ರೈಟ್ನೆಸ್ ಕಡಿಮೆ ಮಾಡಿ
ಸ್ಕ್ರೀನ್ನ ಬ್ರೈಟ್ನೆಸ್ ಕಡಿಮೆ ಮಾಡುವುದು ಬಹಳ ಉತ್ತಮ ಕ್ರಮಗಳಲ್ಲಿ ಒಂದು. ಸಾಮಾನ್ಯವಾಗಿ ಎಲೆಕ್ಟ್ರಾನಿಕ್ ಡಿವೈಜ್ಗಳಲ್ಲಿ ಡಿಸ್ಪ್ಲೇ ಹೆಚ್ಚಿನ ಶಕ್ತಿಯನ್ನು ಬಳಸುತ್ತದೆ ಹಾಗೂ ಬೇಗ ಬ್ಯಾಟರಿ ಖಾಲಿಯಾಗುವಂತೆ ಮಾಡುತ್ತದೆ. ಹೀಗಾಗಿ ನಿಮ್ಮ ಆಂಡ್ರಾಯ್ಡ್ ಫೋನ್ನಲ್ಲಿ ಸಾಧ್ಯವಾದಷ್ಟು ಬ್ರೈಟ್ನೆಸ್ ಕಡಿಮೆ ಇಟ್ಟುಕೊಳ್ಳುವುದರಿಂದ ಶಕ್ತಿಯ ಬಳಕೆಯನ್ನು ಕಡಿಮೆ ಮಾಡುತ್ತದೆ
ಟರ್ನ್ ಆಫ್ ಸಮಯ ಕಡಿಮೆ ಮಾಡಿ
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳ ಸ್ಕ್ರೀನ್ ಆಟೋಮ್ಯಾಟಿಕ್ ಆಗಿ ಟರ್ನ್ ಆಫ್ ಆಗುತ್ತದೆ. ಆದರೆ, ಹೀಗೆ ಟರ್ನ್ ಆಫ್ ಆಗುವ ಸಮಯವನ್ನು ಸೆಟ್ ಮಾಡುವ ಅವಕಾಶ ಕೂಡಾ ಬಳಕೆದಾರರಿಗೆ ಇದೆ. ಹೀಗಾಗಿ, ಸ್ಕ್ರೀನ್ ಟರ್ನ್ ಅಫ್ ಆಗುವ ಸಮಯವನ್ನು ಆದಷ್ಟು ಕಡಿಮೆ ಇಟ್ಟುಕೊಳ್ಳುವುದು ಉತ್ತಮ.
ಆಟೋಮ್ಯಾಟಿಕ್ ಬ್ರೈಟ್ನೆಸ್
ಆಧುನಿಕ ಸ್ಮಾರ್ಟ್ಫೋನ್ಗಳು ಸಾಮಾನ್ಯವಾಗಿ ಅಂಬಿಯೆಂಟ್ ಲೈಟ್ ಸೆನ್ಸರ್ ಹೊಂದಿದ್ದು, ಪರಿಸರದ ಪರಿಸ್ಥಿತಿಗಳ ಆಧಾರದ ಮೇಲೆ ಸ್ಕ್ರೀನ್ನ ಬ್ರೈಟ್ನೆಸ್ ಅನ್ನು ಸರಿಹೊಂದಿಸುತ್ತವೆ. ಈ ವೈಶಿಷ್ಟ್ಯವನ್ನು ಎನೇಬಲ್ ಮಾಡಿ.
ಅಪ್ಲಿಕೇಷನ್ಗಳಿಗೆ ಬ್ಯಾಟರಿ ಬಳಕೆಯನ್ನು ಮಿತಿಗೊಳಿಸಿ
ಬ್ಯಾಕ್ಗ್ರೌಂಡ್ ಅಪ್ಲಿಕೇಷನ್ಗಳು ಸಾಕಷ್ಟು ಸಿಸ್ಟಮ್ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತವೆ. ಇದು ಹೆಚ್ಚಿನ ಬ್ಯಾಟರಿ ಬಳಕೆಗೆ ಕೊಡುಗೆ ಕೊಡುತ್ತವೆ.
ಪವರ್ ಸೇವಿಂಗ್ ಮೋಡ್
ಆಂಡ್ರಾಯ್ಡ್ ಫೋನ್ಗಳು ಪವರ್ ಸೇವಿಂಗ್ ಮೋಡ್ ಅನ್ನು ಹೊಂದಿರುತ್ತವೆ. ಇದು ಬ್ಯಾಕ್ಗ್ರೌಂಡ್ ಸರ್ವೀಸ್ಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ, ಸ್ಕ್ರೀನ್ ಬ್ರೈಟ್ನೆಟ್ ಕಡಿಮೆ ಮಾಡುವ ಮೂಲಕ ಬ್ಯಾಟರಿ ಉಳಿಸಲು ನೆರವಾಗುತ್ತದೆ