ಕ್ರಿಕೆಟ್ ಆಸ್ಟ್ರೇಲಿಯಾ ಕಂಡ ಸಾರ್ವಕಾಲಿಕ ಶ್ರೇಷ್ಠ ಆಫ್ ಸ್ಪಿನ್ನರ್ ಆಗಿರುವ ನೇಥನ್ ಲಯಾನ್, ಇತ್ತೀಚಿನ ಸಂದರ್ಶನ ಒಂದರಲ್ಲಿ ತಮ್ಮ ನಿವೃತ್ತಿ ಕುರಿತಾಗಿ ಮಾತನಾಡಿದ್ದಾರೆ. 36 ವರ್ಷದ ಅನುಭವಿ ಬೌಲರ್ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ 500ಕ್ಕೂ ಹೆಚ್ಚು ವಿಕೆಟ್ ಪಡೆದ ಮೊದಲ ಹಾಗೂ ಏಕಮಾತ್ರ ಆಫ್ ಸ್ಪಿನ್ನರ್ ಆಗಿದ್ದಾರೆ. ನಿವೃತ್ತಿಯ ಅಂಚಿನಲ್ಲಿರುವ ಅನುಭವಿ ಆಟಗಾರ ಇನ್ನು ಎರಡು ವರ್ಷಗಳ ಕಾಲ ಕ್ರಿಕೆಟ್ಗೆ ಗುಡ್-ಬೈ ಹೇಳುವ ಯಾವುದೇ ಆಲೋಚನೆ ಇಲ್ಲ ಎಂದಿದ್ದಾರೆ.
ಮೊದಲಿಗೆ 2024-25ರ ಸಾಲಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಪ್ರವಾಸಿ ಟೀಮ್ ಇಂಡಿಯಾ ಎದುರು 5 ಪಂದ್ಯಗಳಲ್ಲಿ ಪೈಪೋಟಿ ನಡೆಸಲಿದೆ. ಇದಾದ ಬಳಿಕ 2025-26ರ ಸಾಲಿನ ದಿ ಆಷಸ್ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಪ್ರವಾಸಿ ಇಂಗ್ಲೆಂಡ್ ಎದುರು ಕಾದಾಟ ನಡೆಸಲಿದೆ.
2007-08ರಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಲೆಗ್ ಸ್ಪಿನ್ನರ್ ಶೇನ್ ವಾರ್ನ್, ದಿ ಆಷಸ್ ಟೆಸ್ಟ್ ಸರಣಿಯಲ್ಲಿ ಸಹೋದ್ಯೋಗಿಗಳಾದ ಗ್ಲೆನ್ ಮೆಗ್ರಾತ್, ಜಸ್ಟಿನ್ ಲ್ಯಾಂಗರ್ ಮತ್ತು ಡೇಮಿಯೆನ್ ಮಾರ್ಟಿನ್ ಜೊತೆಗೂಡಿ ನಿವೃತ್ತಿ ತೆಗೆದುಕೊಂಡಿದ್ದರು. ಆ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ಎದುರು ಜಯ ದಾಖಲಿಸಿತ್ತು. ಶೇನ್ ವಾರ್ನ್ ತಮ್ಮ ವೃತ್ತಿಬದುಕಿನಲ್ಲಿ ಆಡಿದ 145 ಪಂದ್ಯಗಳಲ್ಲಿ 25.41ರ ಸರಾಸರಿಯಲ್ಲಿ ಒಟ್ಟಾರೆ 708 ಟೆಸ್ಟ್ ವಿಕೆಟ್ಗಳೊಂದಿಗೆ ವಿದಾಯ ಹೇಳಿದ್ದರು.
ಶೇನ್ ವಾರ್ನ್ ಮಾದರಿ ನಿವೃತ್ತಿ ತೆಗೆದುಕೊಳ್ಳುವ ಯಾವುದೇ ಲೆಕ್ಕಾಚಾರ ತಮಗಿಲ್ಲ ಎಂದು ನೇಥನ್ ಲಯಾನ್ ಸ್ಪಷ್ಟಪಡಿಸಿದ್ದಾರೆ. “ನಿವೃತ್ತಿಗೆ ಇದು ಸಕಾಲವಲ್ಲ. ಈಗಲೇ ನಿವೃತ್ತಿ ತೆಗೆದುಕೊಳ್ಳುವ ಆಲೋಚನೆಯೂ ನನಗಿಲ್ಲ. ಆತುರದಲ್ಲಿ ವೃತ್ತಿಬದುಕು ಮುಗಿಸುವವನು ನಾನಲ್ಲ,” ಎಂದು 36 ವರ್ಷದ ಆಫ್ ಸ್ಪಿನ್ನರ್, ಸಿಡ್ಮಿ ಮಾರ್ನಿಂಗ್ ಹೆರಾಲ್ಡ್ಗೆ ನೀಡಿದ್ದಾರೆ.