ಬೆಂಗಳೂರು: ಬಿಜೆಪಿ-ಜೆಡಿಎಸ್ನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಪ್ರಾಮಾಣಿಕ. ನನ್ನನ್ನು ಮುಗಿಸೋಕೆ ಸಾಧ್ಯವಿಲ್ಲ ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಟಾಂಗ್ ಕೊಟ್ಟಿದ್ದಾರೆ.
ಕಾಡುಪ್ರಾಣಿ- ಮಾನವ ಸಂಘರ್ಷ: ತಡೆಗೆ ಕರ್ನಾಟಕ- ಆಂಧ್ರ ಸರ್ಕಾರದ ನಿರ್ಧಾರ..!
ಮಾತನಾಡಿದ ಸಿದ್ದರಾಮಯ್ಯ, ದ್ವೇಷದ ರಾಜಕಾರಣ ಮಾಡುವವರಿಗೆ ವ್ಯಕ್ತಿ ಹಿನ್ನೆಲೆ, ಚಾರಿತ್ರ್ಯ ನೋಡಲು ಹೋಗಲ್ಲ. ದ್ವೇಷವೊಂದೇ ಅವರ ಮುಂದಿರುತ್ತದೆ. ನನಗೆ ಬಿಜೆಪಿ-ಜೆಡಿಎಸ್ನವರನ್ನು ನಾನು ನೋಡೋಕೆ ಹೋಗಲ್ಲ. ನನ್ನ ರಾಜಕೀಯ ಜೀವನದಲ್ಲಿ ಕಪ್ಪುಮಸಿ ಬಳಿಯುವ ಪ್ರಯತ್ನ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ನಾನು ರಾಜಕೀಯದಲ್ಲಿ ಎಂಎಲ್ಎ ಆಗಿ 41 ವರ್ಷ, ಮಂತ್ರಿಯಾಗಿ 40 ವರ್ಷಗಳಾಗಿ ಬಂತು. ರಾಜ್ಯಕ್ಕೆ 15 ಬಜೆಟ್ ಮಂಡಿಸಿದ್ದೇನೆ. 10-12 ವರ್ಷಗಳಿಗೆ ಹೆಚ್ಚು ಕಾಲ ಹಣಕಾಸು ಮಂತ್ರಿಯಾಗಿದ್ದೆ. ಯಾವತ್ತು ಕೂಡ ಕಳಂಕ ಬಂದಿಲ್ಲ. ನಾನು ಬಡವರ ಪರವಿದ್ದು, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆಂಬ ಕಾರಣಕ್ಕೆ ಈಗ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.