ಬೆಂಗಳೂರು: ಭಾರತದಲ್ಲಿ ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಕಲ್ಪಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಕೇಂದ್ರ ಸರ್ಕಾರ ದೇಶದ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡುತ್ತಿದೆ. ಬಡವರಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡುತ್ತಿದೆ.
ಈ ಯೋಜನೆಯಡಿ ಮನೆಯ ಮಹಿಳೆಯರಿಗೆ ಉಚಿತ LPG ಸಂಪರ್ಕವನ್ನು ಒದಗಿಸಲಾಗುವುದು. ನವವಿವಾಹಿತ ದಂಪತಿಗಳಿಗೆ ಈ ಯೋಜನೆಯು ತುಂಬಾ ಉಪಯುಕ್ತವಾಗಿದೆ. ಒಬ್ಬ ಸಾಮಾನ್ಯ ಬಡ ವ್ಯಕ್ತಿ ತನ್ನ ಹೆಂಡತಿಯ ಹೆಸರಿನಲ್ಲಿ ಹೊಸ ಗ್ಯಾಸ್ ಸಂಪರ್ಕವನ್ನು ಉಚಿತವಾಗಿ ಪಡೆಯಬಹುದು.
ಈ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ, ಪ್ರತಿ ಕುಟುಂಬವು ಒಮ್ಮೆ ಮಾತ್ರ ಉಚಿತ ಗ್ಯಾಸ್ ಸಂಪರ್ಕವನ್ನು ಪಡೆಯಬಹುದು. ನಿಮ್ಮ ಕುಟುಂಬದ ಯಾವುದೇ ಸದಸ್ಯರು ಈ ಪ್ರಯೋಜನವನ್ನು ಈ ಹಿಂದೆ ಪಡೆಯದಿದ್ದಲ್ಲಿ ಮಾತ್ರ ನೀವು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಿ.
ನಿಮಗೆ ಗೊತ್ತೆ..? ವೀಸಾ ಬೇಡ, ಭಾರತೀಯ Passport ಒಂದಿದ್ದರೆ ಸಾಕು ಈ ದೇಶಗಳಿಗೆ ಹೋಗಬಹುದು!
ಬಿಳಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಗೊಳಿಸಲಾಗುವುದು. ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬಗಳು ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ಪಡೆಯಲು ಅರ್ಜಿ ಸಲ್ಲಿಸಬಹುದು. ಸರ್ಕಾರ ಫಲಾನುಭವಿಗಳಿಗೆ ಮೊದಲ ಮರುಪೂರಣವನ್ನು ಉಚಿತವಾಗಿ ನೀಡುತ್ತದೆ. ಆದರೆ ಮಹಿಳೆಯರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗುತ್ತಾರೆ ಎಂಬುದನ್ನು ನೆನಪಿನಲ್ಲಿಡಬೇಕು.
ಈ ಯೋಜನೆಗೆ ಅರ್ಜಿದಾರರು ಮಹಿಳೆ ಮತ್ತು ಮನೆಯ ಮುಖ್ಯಸ್ಥರಾಗಿರಬೇಕು. ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಮೊಬೈಲ್ ಸಂಖ್ಯೆ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಪಡಿತರ ಚೀಟಿ ವಿವರಗಳೊಂದಿಗೆ ನೋಂದಣಿ ಮಾಡಬೇಕು. ಪ್ರಸ್ತುತ ಚಾಲನೆಯಲ್ಲಿರುವ ಉಜ್ವಲ ಯೋಜನೆ 2.O ಅಡಿಯಲ್ಲಿ ನೀವು ಜನ ಸೇವಾ ಕೇಂದ್ರಕ್ಕೆ ಹೋಗಿ ಅಲ್ಲಿ ನೋಂದಾಯಿಸಿಕೊಳ್ಳಬಹುದು. ಇತರ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಕೆ ಹಂತಗಳು
ಮೊದಲಿಗೆ, ಅರ್ಹ ಫಲಾನುಭವಿಯು ಉಜ್ವಲ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ. ಅರ್ಜಿಯ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅರ್ಜಿ ಡೌನ್ಲೋಡ್ ಆದ ನಂತರ ಫಾರ್ಮ್ ನಲ್ಲಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಬೇಕು. ಅರ್ಜಿದಾರನ ಹೆಸರು, ದಿನಾಂಕ, ಸ್ಥಳ, ಮೊದಲಾದಂತೆ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ನಿಮ್ಮ ಸ್ಥಳೀಯ ಎಲ್ಪಿಜಿ ಏಜೆನ್ಸಿಗೆ ಸಲ್ಲಿಸಬೇಕು. ಈಗ ದಾಖಲೆ ಪರಿಶೀಲನೆ ನಂತರ ನಿಮಗೆ ಎಲ್ ಪಿಜಿ ಗ್ಯಾಸ್ ಸಂಪರ್ಕ ಸಿಗಲಿದೆ.