ಪ್ರತಿ ವರ್ಷವೂ ಭಾರತೀಯ ಕ್ರಿಕೆಟ್ನಲ್ಲಿ ಯಾರಾದರೂ ಒಬ್ಬರು ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸುತ್ತಾರೆ. ಅದರಂತೆ 2024ರಲ್ಲಿಯೂ ಕೆಲ ಸ್ಟಾರ್ ಕ್ರಿಕೆಟಿಗರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುವ ಸಾಧ್ಯತೆ ಇದೆ.
ಇತ್ತೀಚಿನ ದಿನಗಳಲ್ಲಿ ಪೋಸ್ಟ್ ರಿಟೈನ್ಮೆಂಟ್ ಲೀಗ್ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿವೆ. ದೇಶದ ಪರ ಆಡಲು ಅವಕಾಶಗಳು ಬಂದ್ ಆದ ಬಳಿಕ ಸಹಜವಾಗಿ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಾರೆ. ಅದರಂತೆ ಪ್ರಸಕ್ತ ವರ್ಷದಲ್ಲಿ ಶಿಖರ್ ಧವನ್ ಸೇರಿದಂತೆ ನಾಲ್ವರು ಭಾರತೀಯ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಅಂತಹ ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಶಿಖರ್ ಧವನ್
ಕಳೆದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಆಟಗಾರರ ರೇಸ್ನಲ್ಲಿ ಶಿಖರ್ ಧವನ್ ಕೂಡ ಇದ್ದರು. ಆದರೆ, ಅವರಿಗೆ ಭಾರತ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಶುಭಮನ್ ಗಿಲ್ ಅವರು ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದರಿಂದ ಧವನ್ ಕಮ್ಬ್ಯಾಕ್ಗೆ ಅವಕಾಶ ಸಿಕ್ಕಿರಲಿಲ್ಲ. ಅಂದ ಹಾಗೆ ಪ್ರಸ್ತುತ ಶಿಖರ್ ಧವನ್ ದೇಶಿ ಕ್ರಿಕೆಟ್ನಲ್ಲಿ ಸಕ್ರಿಯರಾಗಿಲ್ಲ.
ವೃದ್ದಿಮಾನ್ ಸಹಾ
ಭಾರತ ತಂಡದಲ್ಲಿ ಅವಕಾಶ ಕಳೆದುಕೊಂಡ ಬಳಿಕ ವೃದ್ದಿಮಾನ್ ಸಹಾ ಅವರು ದೇಶಿ ಕ್ರಿಕೆಟ್ನಲ್ಲಿ ಸಕ್ರಿಯರಾಗಿದ್ದಾರೆ. ಇವರು ಕೂಡ 2024ರ ಐಪಿಎಲ್ನಲ್ಲಿ ಆಡಲು ಎದುರು ನೋಡುತ್ತಿದ್ದಾರೆ.
ಅಮಿತ್ ಮಿಶ್ರಾ
2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಬಲ್ಲ ಆಟಗಾರರ ಪೈಕಿ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಕೂಡ ಇದ್ದಾರೆ. ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಅಮಿತ್ ಮಿಶ್ರಾ ವಿದಾಯ ಹೇಳಿಲ್ಲವೆಂದು ಹಲವು ಆಟಗಾರರಿಗೆ ಇನ್ನೂ ಗೊತ್ತಿಲ್ಲ. ಕಳೆದ ವರ್ಷ ಲಖನೌ ಸೂಪರ್ ಜಯಂಟ್ಸ್ ಮಿಶ್ರಾ ಅವರನ್ನು ಖರೀದಿಸಿ ಅಚ್ಚರಿ ಮೂಡಿಸಿತ್ತು
ದಿನೇಶ್ ಕಾರ್ತಿಕ್
ಪ್ರಸಕ್ತ ವರ್ಷದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಬಲ್ಲ ಆಟಗಾರರ ಸಾಲಿನಲ್ಲಿ ದಿನೇಶ್ ಕಾರ್ತಿಕ್ ಕೂಡ ಒಬ್ಬರಾಗಿದ್ದಾರೆ. 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಭಾರತ ತಂಡಕ್ಕೆ ಮರಳಿದ್ದ ದಿನೇಶ್ ಕಾರ್ತಿಕ್, ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು.